ಕ್ರೈಂರಾಜ್ಯ

ಪ್ರೀತಿ, ಪ್ರೇಮದ ಅಪಪ್ರಚಾರಕ್ಕೆ ಉಸಿರು ಚೆಲ್ಲಿದ 9ನೇ ತರಗತಿ ವಿದ್ಯಾರ್ಥಿನಿ..! ಯುವಕರ ಕೃತ್ಯಕ್ಕೆ ಏಕೈಕ ಪುತ್ರಿಯನ್ನು ಕಳೆದುಕೊಂಡ ಹೆತ್ತವರು

ನ್ಯೂಸ್‌ ನಾಟೌಟ್‌: ಖತರ್ನಾಕ್‌ ಯುವಕರ ಪ್ರೀತಿ, ಪ್ರೇಮ, ಅಪಪ್ರಚಾರಕ್ಕೆ ನೊಂದು 9ನೇ ತರಗತಿಯ ಮುಗ್ದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದ  ಹನಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ.

ಮೃತ ಬಾಲಕಿಯನ್ನು ಇಂಪನಾ (14) ಎಂದು ಗುರುತಿಸಲಾಗಿದೆ. ಈಕೆಯ ಬಗ್ಗೆ ನಾಲ್ವರು ಯುವಕರು ಪ್ರೀತಿ, ಪ್ರೇಮದ ಅಪಪ್ರಚಾರ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿದ್ದರು. ಗಗನ್, ಸಂಜಯ್ , ಮಹೇಂದ್ರ ಹಾಗೂ ಲೋಹಿತ್ ಎಂಬವರು ಹನಕೆರೆ ಗ್ರಾಮದ ಗಗನ್ ಮತ್ತು ಸ್ನೇಹಿತರು ಸೇರಿ ಇಂಪನಾ- ಮಹೇಂದ್ರ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗಾಳಿ ಸುದ್ದಿ ಹಬ್ಬಿಸಿದ್ದರು. ಅಲ್ಲದೆ ಆಕೆ ಮಾತಾಡುವುದನ್ನು ರೆಕಾರ್ಡ್ ಮಾಡಿಕೊಂಡು ವೈರಲ್ ಮಾಡಿದ್ದರು. ಇದರಿಂದ ಬೇಸತ್ತ ಇಂಪನಾ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇತ್ತ ಏಕೈಕ ಪುತ್ರಿಯನ್ನು ಕಳೆದುಕೊಂಡ ಇಂಪನಾ ಹೆತ್ತವರು ಕಣ್ಣೀರು ಹಾಕುವಂತಾಗಿದೆ. ಮಗಳ ಸಾವಿಗೆ ಕಾರಣರಾದ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿಯ ಹೆತ್ತವರು ಒತ್ತಾಯಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.

Related posts

ಸಂಪಾಜೆ ದರೋಡೆ ಪ್ರಕರಣ: ಪೊಲೀಸರ ಜತೆ ಪ್ರಮುಖ ರೂವಾರಿಯ ಕಣ್ಣಾಮುಚ್ಚಾಲೆ ಆಟ..!

ಬಲಿಪ ಪ್ರಸಾದ್ ಭಾಗವತರು ಇನ್ನಿಲ್ಲ

ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ ಗೂಳಿ..! 15ಕ್ಕೂ ಹೆಚ್ಚು ಮಂದಿಗೆ ಗಾಯ..! ಇಲ್ಲಿದೆ ವೈರಲ್ ವಿಡಿಯೋ