Latestದೇಶ-ವಿದೇಶವೈರಲ್ ನ್ಯೂಸ್

95ನೇ ವಯಸ್ಸಿನಲ್ಲಿ ಹಸೆಮಣೆ ಏರಿದ ಅಜ್ಜ-ಅಜ್ಜಿ..! 70 ವರ್ಷ ಒಂದೇ ಮನೆಯಲ್ಲಿ ಇದ್ದುಕೊಂಡು ಮದುವೆಯಾಗದೆ ಜೀವಿಸುತ್ತಿದ್ದ ಜೋಡಿ..!

971

ನ್ಯೂಸ್ ನಾಟೌಟ್: ಜೋಡಿಯೊಂದು 70 ವರ್ಷಗಳಿಂದ ಲಿವ್ ಇನ್‌ ರಿಲೇಶ್ ಎಂಬ ಪದವೇ ಗೊತ್ತಿಲ್ಲದೆ ಆ ರೀತಿ ಇದ್ದರು. ವೃದ್ಧಾಪ್ಯದಲ್ಲಿ ಹಸಮಣೆ ಏರಿರುವ ಅಪರೂಪದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ರಾಜಸ್ಥಾನದ ಡುಂಗರಪುರ ಜಿಲ್ಲೆಯ ಗಾಲಂದರ್ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಡುಂಗರಪುರದ ರಾಮ ಅಂಗರಿ (95) ಹಾಗೂ ಜೀವಲಿ ದೇವಿ (90) ಎಂಬ ಇಬ್ಬರು 70 ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ ನಲ್ಲಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನುವುದು ಅಚ್ಚರಿ.

ಈ ಜೋಡಿ ಒಂದೇ ಮನೆಯಲ್ಲಿ ಇದ್ದುಕೊಂಡು ಮದುವೆಯಾಗದೇ ಜೀವನ ನಡೆಸುತ್ತಿದ್ದರು. ಈ ಜೋಡಿಗೆ 4 ಗಂಡು ಹಾಗೂ 4 ಹೆಣ್ಣುಮಕ್ಕಳಿದ್ದಾರೆ. ಈ ಪೈಕಿ ನಾಲ್ವರು ಮಕ್ಕಳು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಬಹಳ ಹಿಂದೆಯೇ ಮದುವೆಯಾಗಬೇಕಿದ್ದ ಈ ಜೋಡಿಯ ಕನಸನ್ನು ಮಕ್ಕಳು ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ನೆರವೇರಿಸಿದ್ದಾರೆ.

ಪುತ್ರರು, ಪುತ್ರಿಯರು, ಮೊಮ್ಮಕ್ಕಳು ಎಲ್ಲರೂ ಈ ವಿಶಿಷ್ಟ ಮದುವೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ಯುವ ಜೋಡಿಗಳ ವಿವಾಹದಂತೆ ಹಳದಿ, ಮೆಹಂದಿ ಮತ್ತು ಬಿಂದೋರಿಯಂತಹ ಎಲ್ಲಾ ಆಚರಣೆಗಳನ್ನು ನಡೆಸಲಾಯಿತು. ಮದುವೆಯಲ್ಲಿ ಡಿಜೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದ್ದು, ಮಕ್ಕಳು, ಮೊಮ್ಮಕ್ಕಳು ಮತ್ತು ಗ್ರಾಮಸ್ಥರು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅಪರೂಪದ ಮದುವೆಯಲ್ಲಿ ಇಡೀ ಊರಿಗೆ ಊರೇ ಭಾಗಿಯಾಗಿ ಸಂಭ್ರಮಿಸಿದೆ.

ಜೂ.10ರಂದು ಭಾರತದಿಂದ 4 ಗಗನಯಾತ್ರಿಗಳ ಸಹಿತ ಬಾಹ್ಯಾಕಾಶ ಯಾನ..! ಎಲಾನ್‌ ಮಸ್ಕ್‌ ನೇತೃತ್ವದ ಸ್ಪೇಸ್‌-ಎಕ್ಸ್‌ ಸಂಸ್ಥೆಯಿಂದ ನೆರವು

ಈ ವಾರದ ಈ ಪೇಪರ್ , ಅಂಗೈನಲ್ಲೇ ನ್ಯೂಸ್ ಪೇಪರ್

See also  ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆರ್‌ ಅಶ್ವಿನ್‌..! ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಅಶ್ವಿನ್‌
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget