ವೈರಲ್ ನ್ಯೂಸ್ಸಿನಿಮಾ

95 ದಿನಗಳಿಂದ ನಟನ ಮನೆ ಮುಂದೆ ಟೆಂಟ್ ಹಾಕಿ ಕಾಯ್ತಿದ್ದ ಅಭಿಮಾನಿ..! ತನ್ನ ಕಂಪ್ಯೂಟರ್ ಸೆಂಟರ್ ಅನ್ನು ಮುಚ್ಚಿ ಜಾರ್ಖಂಡ್‌ ನಿಂದ ಬಂದಿದ್ದ ಅಭಿಮಾನಿಗೆ ಕೊನೆಗೂ ನಟನ ದರ್ಶನ

241

ನ್ಯೂಸ್ ನಾಟೌಟ್: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಗೆ ಅಸಂಖ್ಯ ಫ್ಯಾನ್ಸ್‌ ಇದ್ದಾರೆ. ಮುಂಬೈನಲ್ಲಿರುವ ಶಾರುಖ್‌ ನಿವಾಸ ಮನ್ನತ್‌ ನ (Mannat) ಹೊರಗೆ ಸಾಕಷ್ಟು ಫ್ಯಾನ್ಸ್‌ ನಟನನ್ನು ನೋಡಲೆಂದೆ ಮುಗಿಬೀಳುತ್ತಾರೆ. ಆದರೆ ಶಾರುಖ್‌ ಫ್ಯಾನ್ ವೊಬ್ಬರು ಸುಮಾರು 95 ದಿನಗಳಿಂದ ನಟನ ಮನೆ ಮುಂದೆ ಕಾಯುತ್ತಿರುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.

ಎಲ್ಲೆಡೆ ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದ ಶಾರುಖ್ ಖಾನ್, ಇತ್ತೀಚೆಗೆ ಜಾರ್ಖಂಡ್‌ನ ಅಭಿಮಾನಿಯೊಬ್ಬರ ಪ್ರೀತಿಗೆ ಫುಲ್‌ ಸಂತಸ ವ್ಯಕ್ತಪಡಿಸಿದ್ದಾರೆ. ತನ್ನ ಮೆಚ್ಚಿನ ನಟನನ್ನು ಭೇಟಿಯಾಗಬೇಕು ಎಂಬ ನಿರೀಕ್ಷೆಯಲ್ಲಿ 95 ದಿನಗಳ ಕಾಲ ನಟನ ಮನೆಯ ಹೊರಗೆ ಕಾಯುತ್ತಿದ್ದ ಅಭಿಮಾನಿಯನ್ನು ಕೊನೆಗೂ ಭೇಟಿ ಮಾಡಿದ್ದಾರೆ.

ಅಭಿಮಾನಿ ತನ್ನ ಕಂಪ್ಯೂಟರ್ ಸೆಂಟರ್ ಅನ್ನು ಮುಚ್ಚಿ ನಟನನ್ನು ಭೇಟಿ ಮಾಡಲು ಜಾರ್ಖಂಡ್‌ ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಸುಮಾರು 95 ದಿನಗಳ ಕಾಯುವಿಕೆಯ ನಂತರ, ಶಾರುಖ್‌‌ ಅವರನ್ನು ಭೇಟಿಯಾಗುವ ದಿನ ಅವರಿಗೆ ಒದಗಿದೆ. ಕೊನೆಗೂ ಅಭಿಮಾನಿ ಶಾರುಖ್‌ ಜತೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಕನಸು ನನಸಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಅಭಿಮಾನಿಯ ಹೆಸರು ಜಾರ್ಖಂಡ್‌ನ ಮೊಹಮ್ಮದ್ ಅನ್ಸಾರಿ. ಶಾರುಖ್ ಖಾನ್ ಅವರ ಬಂಗಲೆಯ ಹೊರಗೆ 95 ದಿನಗಳಿಂದ ಬೀಡು ಬಿಟ್ಟಿದ್ದರು. ಈ ಹಿಂದೆಯೇ ಈ ಅಭಿಮಾನಿಯ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು.

Click

https://newsnotout.com/2024/11/guruprasad-kananda-news-lawyer-gajadeesh-kannada-news-video/
https://newsnotout.com/2024/11/bantwal-kannada-news-bike-and-bus-collision-hospitalized/
https://newsnotout.com/2024/11/duplicate-document-creation-and-waqf-issue-bjp/
https://newsnotout.com/2024/11/online-gaming-kannada-news-guruprasad-about-director-and-jaggesh/
https://newsnotout.com/2024/11/kannada-news-cctv-putage-kannada-news-crackers/
See also  'ಫೇಸ್ ಬುಕ್' ಪ್ರೇಮಿಯನ್ನು ನೋಡಲು ಪಾಕಿಸ್ತಾನದಿಂದ ಭಾರತಕ್ಕೆ ಬಂದ ಯುವತಿ..! ಆತನ ಹೆಂಡತಿಯಿಂದ ಪೊಲೀಸರಿಗೆ ದೂರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget