ಕರಾವಳಿಬೆಂಗಳೂರುರಾಜಕೀಯ

ಪ್ರಧಾನಿ ಮೋದಿ ಸರ್ಕಾರಕ್ಕೆ 9 ವರ್ಷದ ಸಂಭ್ರಮ: 9 ವರ್ಷದಲ್ಲಿ ಜನರ ಬದುಕು ಹಸನಾಗಿಸುವ ಕೆಲಸ ಮಾಡಿದ್ದೇವೆ

ನ್ಯೂಸ್ ನಾಟೌಟ್:ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರಕ್ಕೆ 9ನೇ ವರ್ಷದ ಸಂಭ್ರಮ. ಈ ಹಿನ್ನಲೆ ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ತಮ್ಮಸಾಧನೆಗಳನ್ನು ಬರೆದುಕೊಂಡು ಸಂತಸ ವ್ಯಕ್ತ ಪಡಿಸಿದ್ದಾರೆ.

ಮೋದಿ ಅವರು ಈ 9 ವರ್ಷಗಳನ್ನು 9 ವರ್ಷಗಳ ಸೇವೆಯೆಂದು ಗುಣಗಾನ ಮಾಡಿದ್ದಾರೆ.ಅಲ್ಲದೇ, ಈ 9 ವರ್ಷಗಳಲ್ಲಿ ತೆಗೆದುಕೊಳ್ಳಲಾದ ಎಲ್ಲ ನಿರ್ಧಾರಗಳು ಜನರ ಬದುಕು ಸುಧಾರಣೆ ಮಾಡುವುದೇ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ನಾವು ಇಂದು, ರಾಷ್ಟ್ರದ ಸೇವೆಯಲ್ಲಿ 9 ವರ್ಷಗಳನ್ನು ಪೂರೈಸಿದ್ದೇವೆ. ಕೃತಜ್ಞತೆ ಮತ್ತು ನಮ್ರತೆ ಭಾವನೆಗಳು ತುಂಬಿ ಬಂದಿವೆ. ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ತೆಗೆದುಕೊಳ್ಳುವ ಪ್ರತಿಯೊಂದು ಕೆಲಸವು ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದ ಮಾಡಲಾಗಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಾವು ಇನ್ನೂ ಹೆಚ್ಚು ಶ್ರಮಿಸುತ್ತೇವೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿಯು ಇಂದಿನ ವಿಶೇಷ ಸಂಪರ್ಕ ಅಭಿಯಾನವನ್ನು ದೇಶಾದ್ಯಂತ ಕೈಗೊಳ್ಳುತ್ತಿದೆ.

Related posts

ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ತಾ. ಸಮಿತಿ ವತಿಯಿಂದ ಶಿಲ್ಪಾಚಾರಿ ಕಾಂತಮಂಗಲರಿಗೆ ಸನ್ಮಾನ

ಕಾರು-ಬಸ್ ನಡುವೆ ಭೀಕರ ಅಪಘಾತ , ಕಾರಿನಲ್ಲಿದ್ದ ಐವರು ದಾರುಣ ಅಂತ್ಯ

ಮಕ್ಕಳಲ್ಲಿ ಎಳವೆಯಲ್ಲೇ ಮೂಡಲಿ ಪರಿಸರ ಜಾಗೃತಿ: ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ. ರಮೇಶ್