ಕ್ರೈಂದೇಶ-ವಿದೇಶವೈರಲ್ ನ್ಯೂಸ್

9 ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ, ಕಲ್ಲೆಸೆದು ಕೊಲೆ..! ರಾತ್ರೋರಾತ್ರಿ ದ್ವೇಷ ಸಾಧಿಸಿದ್ದ ಕಿರಾತಕ..!

ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬ 9 ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ, ಕಲ್ಲೆಸೆದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಗುರುವಾರ(ಅ. 10) ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದೇವಕುಳಿ ಗ್ರಾಮದಲ್ಲಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಮೋಹಿನಿ ಶ್ರೀವಾಸ್ ಎಂಬ ಬಾಲಕಿ ತನ್ನ ಅಣ್ಣನೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಕೋರ ಬಾಲಕಿಯ ಸಹೋದರನ ಮೇಲೂ ಕಲ್ಲು ತೂರಾಟ ನಡೆಸಿದ್ದು, ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಹಿಂದೆ ಬಾಲಕಿ ತಮಾಷೆ ಮಾಡಿದ್ದಕ್ಕೆ ವ್ಯಕ್ತಿ ಕೋಪಗೊಂಡು ದ್ವೇಷ ಸಾಧಿಸಿದ್ದ ಎನ್ನಲಾಗಿದೆ.

ವಿಚಾರಣೆ ವೇಳೆ ಗೋವರ್ಧನ್ ಪಟೇಲ್ ತಪ್ಪೊಪ್ಪಿಕೊಂಡಿದ್ದು, ಬಾಲಕಿ ತನ್ನನ್ನು ಎಲ್ಲರೆದುರು ತಮಾಷೆ ಮಾಡಿದ್ದು ಕೋಪಕ್ಕೆ ಕಾರಣವಾಗಿತ್ತು ಎಂದು ಹೇಳಿದ್ದಾನೆ. ಮೋಹಿನಿಯ ಸಹೋದರ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಆತನನ್ನೂ ಕೊಲ್ಲುತ್ತಿದ್ದೆ ಎಂದು ಆರೋಪಿ ಹೇಳಿದ್ದಾನೆ. ಆತನಿಂದ ಬಾಲಕಿಯ ಕಾಲುಂಗುರವನ್ನು ವಶಪಡಿಸಿಕೊಳ್ಳಲಾಗಿದೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೋಹಿನಿಯ ಮೃತದೇಹವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಶುಕ್ರವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.

ಮೃತ ಮೋಹಿನಿ ಶ್ರೀವಾಸ್ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆ ತನ್ನ ಅಜ್ಜಿ ಮತ್ತು ಚಿಕ್ಕಪ್ಪನೊಂದಿಗೆ ದೇವ್ಕುಲಿಯಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆಕೆಯ ಪೋಷಕರು ದಿಲ್ಲಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆರೋಪಿ ಗೋವರ್ಧನ್ ಪಟೇಲ್ ಕೂಡ ಅದೇ ಗ್ರಾಮದ ನಿವಾಸಿ ಎನ್ನಲಾಗಿದೆ.

Click

https://newsnotout.com/2024/10/sanjay-datt-in-kateel-durgaparameshwari-temple/
https://newsnotout.com/2024/10/vijayadashami-kannada-news-bjp-leader-distributed-sowrd-to-girls/
https://newsnotout.com/2024/10/9-year-old-girl-nomore-kannada-news-deva-guli/

Related posts

ದರ್ಶನ್‌ ಪ್ರಕರಣದಲ್ಲಿ ಮತ್ತೆ ವಿಚಾರಣೆಗೆ ಹಾಜರಾದ ಚಿಕ್ಕಣ್ಣ..! ಹೀಗೆ ಅಂತ ಗೊತ್ತಿದ್ದರೆ ದರ್ಶನ್ ರನ್ನು ಭೇಟಿಯಾಗುತ್ತಿರಲಿಲ್ಲ ಎಂದ ನಟ..!

ಅರಣ್ಯ ಇಲಾಖೆ ಭೂಮಿಯಲ್ಲಿ ದೇವಾಲಯವಿದೆ ಎಂದು ತಡರಾತ್ರಿ ಬೇಲಿ ಹಾಕಲು ಬಂದ ಅರಣ್ಯಾಧಿಕಾರಿಗಳು..! 100 ವರ್ಷಕ್ಕೂ ಹಳೇಯ ದೇವಾಲಯವನ್ನು ರಕ್ಷಿಸಿದ ಗ್ರಾಮಸ್ಥರು

ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ತಂದೆ..! ಪತಿಯನ್ನು ಕೊಂದು, ತುಂಡರಿಸಿ ಕೃಷಿಭೂಮಿಗೆ ಎಸೆದ ಪತ್ನಿ..!