ಕ್ರೈಂ

8 ನೇ ತರಗತಿ ಬಾಲಕಿಗೆ 8 ಬಾರಿ ಚಾಕು ಇರಿದ ದುಷ್ಕರ್ಮಿ..!

173
Spread the love

ಪಾಟ್ನಾ: 8 ನೇ ತರಗತಿ ಬಾಲಕಿಗೆ ಯುವಕನೊಬ್ಬ 13 ಸೆಕೆಂಡ್‌ಗಳಲ್ಲಿ 8 ಬಾರಿ ಚಾಕು ಇರಿದ ಘಟನೆ ಬಿಹಾರದ ಗೋಪಾಲಗಂಜ್ ನಲ್ಲಿ ನಡೆದಿದೆ. ಯುವಕ ತುಂಬ ದಿನಗಳಿಂದಲೂ ಬಾಲಕಿಯನ್ನು ಹಿಂಬಾಲಿಸುತ್ತಲೇ ಇದ್ದ. ದೌರ್ಜನ್ಯವನ್ನು ಎಸಗುತ್ತಿದ್ದ. ಆದರೆ ಬಾಲಕಿ ಅದನ್ನ ಪ್ರತಿರೋಧಿಸುತ್ತಲೇ ಬಂದಿದ್ದಳು. ಆದರೆ, ಡಿ.೧೯ರಂದು ಯುವಕ ಬಾಲಕಿಯನ್ನು ಚಾಕುವಿನಿಂದ ಇರಿದು ಕ್ರೌರ್ಯ ತೋರಿದ್ದಾನೆ.

ಘಟನೆಯ ವೈರಲ್ ವಿಡಿಯೋ ಇಲ್ಲಿದೆ ನೋಡಿ

https://twitter.com/NewsroomPostCom/status/1473196598712680450?ref_src=twsrc%5Etfw%7Ctwcamp%5Etweetembed%7Ctwterm%5E1473196598712680450%7Ctwgr%5E%7Ctwcon%5Es1_c10&ref_url=https%3A%2F%2Ftv9kannada.com%2Fnational%2Fa-man-stabbed-8th-class-girl-in-bihar-she-is-injured-critically-lxk-312577.html

ಏನಿದು ಘಟನೆ?

ಬಾಲಕಿ, ಇಬ್ಬರು ಸ್ನೇಹಿತೆಯರೊಂದಿಗೆ ಮನೆಗೆ ತೆರಳುತ್ತಿದ್ದಳು. ಈ ವೇಳೆ ಯುವಕ ತನ್ನಿಬ್ಬರು ಸಹಾಯಕರೊಂದಿಗೆ ಆಕೆ ಬರುವ ರಸ್ತೆಯಲ್ಲೇ ಅಡಗಿ ಕುಳಿತಿದ್ದ. ಬಾಲಕಿಯನ್ನು ಕಾಣುತ್ತಿದ್ದಂತೆ, ಒಮ್ಮೆಲೇ ಬಂದು ಚಾಕುವಿನಿಂದ ದಾಳಿ ಮಾಡಿದ್ದಾನೆ. ಒಂದು ಬಾರಿ ಅಲ್ಲ, 13 ಸೆಕೆಂಡ್‌ಗಳಲ್ಲಿ ಒಟ್ಟು 8 ಬಾರಿ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಬಾಲಕಿಯ ಪರಿಸ್ಥಿತಿ ಗಂಭೀರವಾಗಿದೆ. ಮೊದಲು ಗೋಪಾಲಗಂಜ್ ನ ಸಾದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಸಾಧ್ಯವಾಗದೆ ಪಾಟ್ನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ನಡೆದ ಜಾಗದಲ್ಲಿದ್ದ ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.

See also  ಬೆದರಿಕೆ ಕರೆಗಳಿಗೆ ಹೆದರಿದರಾ ಸಲ್ಮಾನ್? ಬುಲೆಟ್‌ ಪ್ರೂಫ್ ಕಾರು ಖರೀದಿಸಿದ ಬಾಲಿವುಡ್ ನಟ!
  Ad Widget   Ad Widget   Ad Widget