ಕರಾವಳಿಕಾಸರಗೋಡು

ನದಿಯಲ್ಲಿ ಮುಳುಗುತ್ತಿದ್ದವನನ್ನು ರಕ್ಷಿಸಿದ 8ರ ಬಾಲಕ !

414

ನ್ಯೂಸ್ ನಾಟೌಟ್: ಸ್ನಾನಕ್ಕೆಂದು ನದಿಗಿಳಿದು ನೀರಿನ ಸೆಳೆತಕ್ಕೊಳಗಾಗಿ ಅಪಾಯಕ್ಕೆ ಸಿಲುಕಿದ 11ರ ಹರೆಯದ ಬಾಲಕನನ್ನು 8 ವರ್ಷದ ಬಾಲಕ ಕಾಪಾಡಿದ ಘಟನೆ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಸಮೀಪದ ಪಳ್ಳಂಗೋಡು ಪಯಸ್ವಿನಿ ನದಿಯಲ್ಲಿ ನಡೆದಿದೆ.

ಇಲ್ಲಿನ ಸ್ಥಳೀಯ ಬಾಲಕ ಪಳ್ಳಂಗೋಡು ಸಮೀಪದ ಪಯಸ್ವಿನಿ ಹೊಳೆಯಲ್ಲಿ ಈಜಾಡುತ್ತಿದ್ದಾಗ ಪಾಯಕ್ಕೆ ಸಿಲುಕಿದ್ದ. ತಕ್ಷಣ ಆತನ ಜತೆಗಿದ್ದ 8 ವರ್ಷದ ಬಾಲಕ ಪಳ್ಳಂಗೋಡಿನ ಇಬ್ರಾಹಿಂ ನಈಮಿ-ಬುಶ್ರಾ ದಂಪತಿಯ ಪುತ್ರ ಸ್ಥಳೀಯ ಎಲ್‌ಪಿ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಹಿಬಾತುಲ್ಲ ತನ್ನ ಜೀವವನ್ನು ಲೆಕ್ಕಿಸದೆ ಮುಳುಗುತ್ತಿದ್ದವನನ್ನು ಮೇಲೆಕ್ಕೆತ್ತಿ ರಕ್ಷಿಸಿದ್ದಾನೆ. ಬಾಲಕನ ಸಾಹಸ ಮತ್ತು ಸಮಯಪ್ರಜ್ಞೆಯಿಂದ ಇನ್ನೊಬ್ಬ ಬಾಲಕನ ಜೀವ ಕಾಪಾಡಿದ ಘಟನೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

See also  ವಿಶ್ವ ದಿಗ್ಗಜರ ಚಿತ್ರವನ್ನು ನೆರಳಲ್ಲೇ ಬಿಡಿಸುವ ವಿಚಿತ್ರ ಕಲಾವಿದ..!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget