Latest

ಕಂದಕಕ್ಕೆ ಉರುಳಿ ಬಿದ್ದ ವ್ಯಾನ್, 8 ಮಹಿಳೆಯರು ಮೃತ್ಯು, 29 ಮಂದಿಗೆ ಗಾಯ,ಏನಿದು ಘಟನೆ?

554

ನ್ಯೂಸ್ ನಾಟೌಟ್ :   30 ಅಡಿ ಕಂದಕಕ್ಕೆ ವಾಹನವೊಂದು ಉರುಳಿದ ಪರಿಣಾಮ ಭಾರಿ ಅವಘಡ ಸಂಭವಿಸಿದೆ.ಘಟನೆಯಲ್ಲಿ 8 ಜನ ಮಹಿಳೆಯರು ಸಾಸಾವನ್ನಪ್ಪಿದ್ದು,29 ಜನ ಗಾಯಗೊಂಡ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 40 ಪ್ರಯಾಣಿಕರು‌ ವ್ಯಾನ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ಇವರೆಲ್ಲ ಖೇಡ್ ತಹಸಿಲ್‌ನಲ್ಲಿರುವ ಶ್ರೀ ಕ್ಷೇತ್ರ ಮಹಾದೇವ ಕುಂದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಮೃತರು ಹಾಗೂ ಗಾಯಾಳುಗಳು ಪಾಪಲ್ವಾಡಿ ಗ್ರಾಮದವರಾಗಿದ್ದಾರೆ. ಶ್ರಾವಣ ಮಾಸದ ಶುಭ ಸೋಮವಾರದ ಪೂಜೆಗಾಗಿ ಅವರು ದೇವಾಲಯಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
See also  ಅಂಕತ್ತಡ್ಕ:ಓಡ್ರಪ್ಪೋ ಓಡಿ.. ಕಾಡುಕೋಣಗಳು ಬಂದ್ವು..!ಜನರನ್ನು ಕ್ಯಾರೇ ಮಾಡದೇ ಹಾಡಹಗಲಲ್ಲೇ ರಸ್ತೆಯಲ್ಲಿ ಹೇಗೆ ಓಡಾಡ್ತಿವೆ ನೋಡಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget