ವೈರಲ್ ನ್ಯೂಸ್

ಕೇವಲ 4 ರಿಂದ 5 ನಿಮಿಷಗಳ ಫೋಟೋಶೂಟ್,ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸುವ 8 ತಿಂಗಳ ಕಂದಮ್ಮ!!

37
Spread the love

ನ್ಯೂಸ್‌ ನಾಟೌಟ್‌ : ಸೋಶಿಯಲ್ ಮೀಡಿಯಾ ಹವಾದ ಮಧ್ಯೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೂಡ ಸಂಪಾದನೆ ಮಾಡುತ್ತಿದ್ದಾರೆ. ಅದಕ್ಕೂ ಒಂದು ಅದೃಷ್ಟ ಬೇಕಾಗುತ್ತದೆ. ಕೆಲವೊಬ್ಬರು ತಮ್ಮ ರೀಲ್ಸ್ ವೀಡಿಯೋಗಳಿಂದ ರಾತ್ರೋರಾತ್ರಿ ಸ್ಟಾರ್ ಆಗಿದ್ದು ಉಂಟು. ಅದೇ ರೀತಿ ಇಲ್ಲೊಂದು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ  8 ತಿಂಗಳಿನ ಪುಟ್ಟ ಕಂದಮ್ಮ, 4 ರಿಂದ 5 ನಿಮಿಷಗಳ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡುತ್ತಿದೆ ಅಂದ್ರೆ ನೀವು ನಂಬ್ತೀರಾ? ಹೌದು,ಪುಟ್ಟ ಕಂದಮ್ಮನ ತಿಂಗಳ ಸಂಪಾದನೆಯನ್ನು ಕಂಡು ನೆಟ್ಟಿಗರು  ದಂಗಾಗಿದ್ದಾರೆ.

ಅಮೇರಿಕಾದಲ್ಲಿನ  ಎಂಜೆ ಎಂಬ 8 ತಿಂಗಳಿನ  ಮಗು ಮಾಡೆಲಿಂಗ್ ನಿಂದ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದೆ ಎಂದು ವರದಿ ತಿಳಿಸಿದೆ. ಐದೂವರೆ  ತಿಂಗಳ ಮಗುವಿದ್ದಾಗಲೇ ಇದು   ವಿವಿಧ ಬ್ರಾಂಡ್ ಗಳಿಗೆ ಬೇಬಿ ಮಾಡೆಲ್ ಅಗಿ ಕಾರ್ಯ ನಿರ್ವಹಿಸಲು ಆರಂಭಿಸಿದೆ. ಇದೀಗ ಈ ಮಗು ತನ್ನ ಸಂಪಾದನೆಯ ಮೂಲಕ ಪೋಷಕರಿಗೆ ಆರ್ಥಿಕವಾಗಿ  ಬೆಂಬಲವಾಗಿ ನಿಂತಿದೆ. ಕಳೆದ ಎರಡುವರೆ  ತಿಂಗಳಲ್ಲಿ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡಿದೆ.

ಪ್ರಸ್ತುತ ಎಂಟು ತಿಂಗಳ ಮಗುವಾಗಿರುವ ಎಂಜೆ ಜುಲೈ 5, 2023 ರಲ್ಲಿ ಜನನವಾಗಿತ್ತು.ಎಂಜೆ ತಾಯಿ ಸಾರಾ ಲುಟ್ಜ್ಕರ್ ಸಣ್ಣ ವಯಸ್ಸಿನಲ್ಲಿಯೇ  ತನ್ನ ಮಗು ವಿವಿಧ ಬ್ರಾಂಡ್ ಗಳಿಗೆ ಮಾಡೆಲ್ ಆಗಿ ಆಯ್ಕೆಯಾಗಿದ್ದಕ್ಕೆ ತುಂಬಾನೇ ಖುಷಿಯಾಗಿದ್ದಾರೆ. ಈಗ ಕೇವಲ 4 ರಿಂದ 5 ನಿಮಿಷಗಳ ಫೋಟೋಶೂಟ್ ಗಳಿಂದ ಎಂಜೆ ಉತ್ತಮ ಹಣ ಮತ್ತು ಖ್ಯಾತಿಯನ್ನು ಗಳಿಸುತ್ತಿದ್ದಾಳೆ ನಿಜ. ಆದರೆ ಮಾಡೆಲಿಂಗ್ ಕಾರಣದಿಂದ ಆಕೆಯ ಸುಂದರ ಬಾಲ್ಯವನ್ನು ಕಿತ್ತುಕೊಳ್ಳಲು ನಾನು ಇಷ್ಟಪಡುವುದಿಲ್ಲ. ಆಕೆ ದೊಡ್ಡವಳಾದ ಮೇಲೆ ಆಕೆಗೆ ಇಷ್ಟವಿದ್ದರೆ  ಆಕೆಯನ್ನು ಮಾಡೆಲಿಂಗ್ ಕ್ಷೇತ್ರಕ್ಕೆ  ಸೇರಿಸುವುದಾಗಿ ಸಾರಾ ಹೇಳಿದ್ದಾರೆ.

See also  ಶಾಸಕನ ಕೆನ್ನೆಗೆ ಬಾರಿಸಿದ ಮಹಿಳೆ..! ನದಿ ಪ್ರವಾಹದಿಂದ ರೊಚ್ಚಿಗೆದ್ದ ಮಹಿಳೆಯ ವಿಡಿಯೋ ವೈರಲ್
  Ad Widget   Ad Widget   Ad Widget   Ad Widget