ಕರಾವಳಿ

ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಅಗ್ನಿ ಅವಘಡ: 8 ಸಾವು

ನ್ಯೂಸ್ ನಾಟೌಟ್: ಇಲ್ಲಿನ ಎಲೆಕ್ಟ್ರಿಕ್ ಬೈಕ್‌ ಶೋ ರೂಂ ಒಂದರಲ್ಲಿ ಸೋಮವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೋ ರೂಂ ಮೇಲಿನ ಮಹಡಿಯಲ್ಲಿರುವ ಲಾಡ್ಜ್‌ಗೂ ಬೆಂಕಿ ವ್ಯಾಪಿಸಿದೆ. ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಹೋಗಿವೆ. ಗಾಯಾಳುಗಳನ್ನು ನಗರದ ಗಾಂಧಿ ಮತ್ತು ಯಶೋಧಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದು, ದುರಂತಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. 

Related posts

ವಾಹನ ಹರಿದು ಎರಡು ಹಸುಗಳ ದಾರುಣ ಸಾವು

ವಕೀಲರ ವಿರುದ್ಧ ಪೊಲೀಸ್‌ ದೌರ್ಜನ್ಯ ಆರೋಪ, ವಕೀಲರ ಸಂಘ ಆಕ್ರೋಶ

ಸಂಪಾಜೆ: ಪಿಕಪ್ – ಬೈಕ್ ನಡುವೆ ಅಪಘಾತ, ಬೈಕ್ ಸವಾರ ಕಾಲಿಗೆ ಗಂಭೀರ ಗಾಯ