ಕ್ರೈಂದೇಶ-ವಿದೇಶಬೆಂಗಳೂರು

8 ಜನರೊಂದಿಗೆ ಮದುವೆಯಾಗಿದ್ದಾಳೆ ಎಂದು ಹೈಕೋರ್ಟ್ ಮೆಟ್ಟಿಲೇರಿದ ಪತಿ..! ಎಂಟಲ್ಲ ನಾಲ್ಕೇ ಎಂದ ಮಹಿಳೆ ಪರ ವಕೀಲೆ..!

ನ್ಯೂಸ್ ನಾಟೌಟ್: 8 ಜನ ಪುರುಷರನ್ನು ಮದುವೆಯಾಗಿದ್ದಾಳೆ ಎಂದು ಆರೋಪಿಸಿ ಮಹಿಳೆಯ ವಿರುದ್ಧ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಅತ್ತ ಇನ್ನೊಬ್ಬ ಪುರುಷ, ಮಹಿಳೆ ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದು, ಪ್ರಕರಣ ರದ್ದುಪಡಿಸುವಂತೆ ಹೊಸಪೇಟೆಯ ರಾಜಾ ಹುಸೇನ್ ಎಂಬಾತ ಮನವಿ ಮಾಡಿದ್ದಾನೆ.

ಮಹಿಳೆಯ ಐವರು ಪತಿಯರು ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಗೆ ಖುದ್ದಾಗಿ ಹಾಜರಾಗಿದ್ದರು. ಆದರೆ, ಸಮಯದ ಅಭಾವದಿಂದ ವಿಚಾರಣೆ ಸಾಧ್ಯವಾಗಿರಲಿಲ್ಲ. ಈಗ ಮೂವರು ಪತಿಯರು ಹೈಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಮಹಿಳೆ ವಿರುದ್ಧ ಸಿಸಿಬಿ ತನಿಖೆ ನಡೆಸುವಂತೆ ಕೋರಿದ್ದಾರೆ.

ಆದರೆ, ಪತಿಯ ವಾದಕ್ಕೆ ಆಕ್ಷೇಪ ಎತ್ತಿರುವ ಪತ್ನಿ ಪರ ವಕೀಲೆ, ಇದು ಸುಳ್ಳು ಆರೋಪ, ನಾಲ್ಕು ಜನರನ್ನಷ್ಟೇ ಮಹಿಳೆ ವಿವಾಹವಾಗಿದ್ದಾಳೆ. ಮೊದಲ ಪತಿ ತೀರಿಕೊಂಡ ಬಳಿಕ ವಿವಾಹ ಆಗಿದೆ. ತಲಾಖ್ ಪಡೆದ ನಂತರವಷ್ಟೇ ನಾಲ್ಕು ಮದುವೆಯಾಗಿರುವುದಾಗಿ ಹೈಕೋರ್ಟ್​ಗೆ ತಿಳಿಸಿದ್ದಾರೆ. ಅಲ್ಲದೇ ಎಂಟು ಮದುವೆಯಾಗಿರುವುದಾಗಿ ಆರೋಪಿಸುತ್ತಿರುವ ಪತಿಯ ಪರ ಮಾನನಷ್ಟ ಮೊಕದ್ದಮೆ ದಾಖಲಿಸಲು ಯೋಚಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪತಿ ಪರ ವಕೀಲ, ‘ಎಂಟೂ ಜನರ ದಾಖಲೆಗಳು ತಮ್ಮ ಬಳಿ ಇವೆ. ಕಳೆದ ಬಾರಿ ವಿಚಾರಣೆಗೆ ಐವರು ಪತಿಯರು ಖುದ್ದಾಗಿ ಹಾಜರಾಗಿದ್ದರು. ಆದರೆ, ವಿಚಾರಣೆ ಸಾಧ್ಯವಾಗಿಲ್ಲ. ಇನ್ನೂ ಮೂವರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಮಹಿಳೆ ವಿರುದ್ಧ ಸಿಸಿಬಿ ತನಿಖೆ ನಡೆಸಲು ಆದೇಶಿಸುವಂತೆ ಮನವಿ ಮಾಡಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ಮುಂದೂಡಿದ್ದು, ದಾಖಲೆ ಹಾಜರುಪಡಿಸಿ ವಾದ ಮಂಡಿಸುವಂತೆ ಪತಿಯ ಪರ ವಕೀಲರಿಗೆ ಸೂಚಿಸಿದೆ ಎನ್ನಲಾಗಿದೆ.

Click

https://newsnotout.com/2024/09/police-shock-during-illegal-alcho-kannada-news-viral-video-andra/
https://newsnotout.com/2024/09/arun-kumar-puttila-and-case-high-court-stay-on-investigation-kannada-news/
https://newsnotout.com/2024/09/mangaluru-eletric-scooter-kannada-news-notice-issue-mangaluru-corporation/
https://newsnotout.com/2024/09/electric-scooter-ola-kannada-news-viral-news-fire-on-showroom-police-arrested/
https://newsnotout.com/2024/09/food-corporation-of-india-kannada-news-job-vacency-all-over-india/
https://newsnotout.com/2024/09/muslim-ganesha-chaturti-kannada-news-mother-and-father-v/

Related posts

150 ಅಡಿ ಆಳದ ಕೊಳವೆ ಬಾವಿಯಲ್ಲಿ 57 ಗಂಟೆಗಳ ಕಾಲ ಸಿಲುಕಿದ್ದ ಐದು ವರ್ಷದ ಬಾಲಕ..! ಮಗು ಸಾವನ್ನಪ್ಪಿರುವುದಾಗಿ ಘೋಷಿಸಿದ ವೈದ್ಯರು

ಸೈಬರ್ ಕ್ರೈಂ ಸಮನ್ವಯ ಕೇಂದ್ರಕ್ಕೆ ರಶ್ಮಿಕಾ ಮಂದಣ್ಣ ರಾಷ್ಟ್ರೀಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ..! ಈ ಬಗ್ಗೆ ನಟಿ ಹೇಳಿದ್ದೇನು..?

ಅಕ್ರಮವಾಗಿ ಸಾಗಿಸುತ್ತಿದ್ದ 16 ಲಕ್ಷ ರೂ. ಮೌಲ್ಯದ ಶ್ರೀಗಂಧ ಪೊಲೀಸ್ ವಶಕ್ಕೆ..! ತೆಲಂಗಾಣ ಮೂಲದ ಆರೋಪಿಯ ಬಂಧನ..!