ನ್ಯೂಸ್ ನಾಟೌಟ್: ರೀಲ್ಸ್ ಫಾಲೋವರ್ಸ್ ಹುಚ್ಚಿಗಾಗಿ ಇಲ್ಲೊಂದು ಕಡೆ ೮ ಫ್ಲ್ಯಾಟ್ ಗಳು ಹೊತ್ತಿ ಉರಿದಿರುವ ಘಟನೆ ಬಗ್ಗೆ ವರದಿಯಾಗಿದೆ.ಅತ್ತಿಗೆ ಮೈದುನನ ಕಿತಾಪತಿಯಿಂದಾಗಿ ಇಡೀ ಫ್ಲಾಟ್ ನಲ್ಲಿ ದೊಡ್ಡ ಬೆಂಕಿ ಅನಾಹುತ ಸಂಭವಿಸಿ 8ಕ್ಕೂ ಹೆಚ್ಚು ಫ್ಲಾಟ್ ಗಳಿಗೆ ಭಾರಿ ಹಾನಿಯಾದ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ರೀಲ್ಸ್ ಹುಚ್ಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹುಚ್ಚಿಗೆ ಅನೇಕರು ಅಪಾಯಕಾರಿ ಸಾಹಸಗಳನ್ನು ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ.ಇದರಿಂದ ಇತರರಿಗೂ ಭಾರಿ ತೊಂದರೆಯಾಗುತ್ತಿದೆ. ಈ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಗಳು ಮಾಡುವ ಉಪಟಳಗಳು ಒಂದೆರಡಲ್ಲ, ಅದೇ ರೀತಿ ಇಲ್ಲೊಂದು ಕಡೆ ರೀಲ್ಸ್ ಹುಚ್ಚಿಗಾಗಿ ಅತ್ತಿಗೆ ಹಾಗೂ ಮೈದುನ ಇಬ್ಬರೂ ಸೇರಿಕೊಂಡು ಎಲ್‌ಪಿಜಿ ಗ್ಯಾಸ್ ಸಿಲಿಂಡರನ್ನು ಲೀಕ್ ಮಾಡಿದ್ದು, ಇದರಿಂದ ಭಾರಿ ಬೆಂಕಿ ಅನಾಹುತ ಸಂಭವಿಸಿ 8ಕ್ಕೂ ಹೆಚ್ಚು ಫ್ಲಾಟ್ ಗಳಿಗೆ ಭಾರಿ ಹಾನಿಯಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ ನ 7 ಅಂತಸ್ಥಿನ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಎಲ್‌ಪಿಜಿ ಸಿಲಿಂಡರ್ ಸ್ಪೋಟಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದ ಪೊಲೀಸರಿಂದ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಈ ಅತ್ತಿಗೆ ಮೈದುನ ಜೋಡಿ ಈ ಹಿಂದೆಯೂ ಇಂತಹ ಅಪಾಯಕಾರಿ ಸ್ಟಂಟ್‌ಗಳಲ್ಲಿ ಭಾಗಿಯಾಗುತ್ತಿದ್ದರು ಎನ್ನಲಾಗಿದೆ.ಸಾಮಾನ್ಯವಾಗಿ ಇವರು ತಡರಾತ್ರಿಗಳಲ್ಲೇ ಈ ರೀತಿಯ ಅಪಾಯಕಾರಿ ಸಾಹಸಕ್ಕೆ ಇಳಿಯುತ್ತಿದ್ದಿದ್ದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಹೀಗೆ ಸಾಹಸ ಮಾಡಿ ಈಗ ಪೊಲೀಸರು ಅಥಿತಿಗಳಾದವರನ್ನು ರಂಜನಾ ಜಾಟ್ ಹಾಗೂ ಆಕೆಯ 38 ವರ್ಷದ ಸಂಬಂಧಿ ಅನಿಲ್ ಜಾಟ್ ಎಂದು ಗುರುತಿಸಲಾಗಿದೆ. ಅನಿಲ್ ಜಾಟ್ ನ ಮೊಬೈಲ್‌ನಿಂದ ಇಂತಹ ಹಲವು ಆತಂಕಕಾರಿ ಸಾಹಸಗಳ ವೀಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 287ರ ಅಡಿ ನಿರ್ಲಕ್ಷ್ಯ ಹಾಗೂ ಸುಡುವ ವಸ್ತುಗಳನ್ನು ಅಪಾಯಕಾರಿಯಾಗಿನಿರ್ವಹಿಸಿದ ಪ್ರಕರಣ ದಾಖಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹುಚ್ಚಿನಿಂದ ಮಹಿಳೆ ರಂಜನಾ ಜಾಟ್ ಎಲ್‌ಜಿಪಿಯನ್ನು ಲೀಕ್ ಮಾಡಿದ್ದಾರೆ ಈ ವೇಳೆ ಬೃಹತ್ ಸ್ಫೋಟ ಸಂಭವಿಸಿದೆ. ಅವರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ ಜೊತೆಗೆ 7 ಅಂತಸ್ತಿನ ಕಟ್ಟಡದಲ್ಲಿದ್ದ ಹಲವು ಫ್ಲಾಟ್‌ಗಳಿಗೆ ಭಾರಿ ಹಾನಿಯಾಗಿದೆ. ಭಿಂದ್ ರಸ್ತೆಯ ದಿ ಲೆಗಸಿ ಪ್ಲಾಜಾ ಕಟ್ಟಡದಲ್ಲಿ ತಡ ರಾತ್ರಿ 2.15ರ ಸಮಯದಲ್ಲಿ ಈ ಘಟನೆ ನಡೆದಿದೆ. ರಂಜನಾ ತನ್ನ ಸಂಬಂಧಿ ಅನಿಲ್ ಜಾಟ್ ಜೊತೆ ತಮ್ಮ ಮೊದಲೇನ ಮಹಡಿಯಲ್ಲಿರುವ ಮನೆಯಲ್ಲಿ ವೀಡಿಯೋ ಶೂಟ್ ಮಾಡ್ತಿದ್ದಾಗ ಸ್ಫೋಟ ಸಂಭವಿಸಿದೆ. ಗ್ಯಾಸ್ ಸೋರಿಕೆ ಮಾಡಿದ್ದೆ ಘಟನೆಗೆ ಕಾರಣ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ರಂಜನಾ ಪಿನ್ ಬಳಸಿ ಉದ್ದೇಶಪೂರ್ವಕವಾಗಿ ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಮಾಡಿದ್ದಾಳೆ ಸುಮಾರು 17 ನಿಮಿಷಗಳ ಕಾಲ ಇವರು ರೀಲ್ಸ್ ಶೂಟ್ ಮಾಡಿದ್ದಾರೆ. ಇದರಿಂದ ಅಪಾರ್ಟ್ಮೆಂಟ್ ಗ್ಯಾಸ್ ಚೇಂಬರ್ ಆಗಿ ಬದಲಾಗಿದೆ. ಇತ್ತ ಅನಿಲ್ ವೀಡಿಯೋ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಸಿಎಫ್ಎಲ್ ಲೈಟ್ ಹಾಕಿದ್ದು, ಇದು ಕಿಡಿ ಹೊತ್ತಿಕೊಂಡು ಭಯಾನಕ ಸ್ಫೋಟಕ್ಕೆ ಕಾರಣವಾಯ್ತು. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದರೆ ಇತ್ತ 8 ಫ್ಲಾಟ್ ಗಳಿಗೆ ಭಾರಿ ಹಾನಿಯಾಗಿದೆ. ಸ್ಫೋಟದ ತೀವ್ರತೆಯೂ ರಂಜನಾ ಅವರ ಒಂದು ಬೆಡ್‌ರೂಮ್‌ನ ಮನೆಯನ್ನು ಹಾನಿ ಮಾಡುವ ಜೊತೆಗೆ ಪಕ್ಕದಲ್ಲಿದ್ದ ಮನೆಗಳಿಗೂ ಹಾನಿ ಮಾಡಿದೆ.