ದೇಶ-ವಿದೇಶವಿಡಿಯೋವೈರಲ್ ನ್ಯೂಸ್

8 ಶತಮಾನಗಳ ನಂತರ ಐಸ್ಲ್ಯಾಂಡ್‌ ನಲ್ಲಿ ಉಕ್ಕಿದ ಜ್ವಾಲಾಮುಖಿ..! ವಿಮಾನದ ಕಿಟಕಿಯಿಂದ ಅದ್ಭುತ ದೃಶ್ಯ ಸೆರೆ, ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಪ್ರಾಕೃತಿಕ ವಿಸ್ಮಯಗಳಿಂದಲೇ ಫೇಮಸ್ ಆಗಿರುವ ಐಸ್‌ ಲ್ಯಾಂಡ್‌ ನಲ್ಲಿ ಈಗ ಅದ್ಭುತವಾದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇವರ ಸೃಷ್ಟಿ ಪ್ರಕೃತಿಯ ವಿಸ್ಮಯಕ್ಕೆ ಜನ ಬೆರಗಾಗಿದ್ದಾರೆ. ಅಂದಹಾಗೆ ಇದು ಐಸ್‌ ಲ್ಯಾಂಡ್‌ ನಲ್ಲಿ ಜ್ವಾಲಾಮುಖಿಯೊಂದು ಉಕ್ಕುತ್ತಿರುವ ಅದ್ಭುತ ದೃಶ್ಯವಾಗಿದ್ದು, ಇದನ್ನು ವಿಮಾನದ ಕಿಟಿಕಿಯೊಂದರ ಮೂಲಕ ವಿಮಾನ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದಾರೆ.

ಇದು ಯುರೋಪಿಯನ್ ರಾಷ್ಟ್ರ ಐಸ್‌ ಲ್ಯಾಂಡ್‌ ನ ಪ್ರವಾಸಿ ತಾಣವಾದ ಬ್ಲೂ ಲಾಗೂನ್‌ ನಲ್ಲಿ ನಡೆದ ಪ್ರಾಕೃತಿಕ ವಿಸ್ಮಯವಾಗಿದ್ದು, ಲಾವಾ ಉಕ್ಕಿದ ಕಾರಣದಿಂದ ಅಲ್ಲಿ ಬ್ಲೂ ಲಗೂನ್ ಹಾಗೂ ಗ್ರೀಂಡ್‌ ವಿಕ್ ಪ್ರದೇಶದಲ್ಲಿ ಜನರನ್ನು ಸ್ಥಳಾಂತರ ಮಾಡಲಾಗಿದೆ. ಆದರೆ ಈ ಜ್ವಾಲಾಮುಖಿ ಉಕ್ಕುತ್ತಿರುವ ದೃಶ್ಯವೂ ಭೂಮಿಯ ಮಧ್ಯೆ ಬೆಂಕಿ ಕೆಂಡದ ಕರಗಿ ಹೊಳೆ ಹರಿಯುತ್ತಿರುವಂತೆ ಕಾಣುತ್ತಿದೆ.

ಸುಮಾರು ಎಂಟು ಶತಮಾನಗಳ ನಂತರ ಐಸ್ಲ್ಯಾಂಡ್‌ನಲ್ಲಿ ಬೃಹತ್ ಜ್ವಾಲಾಮುಖಿ ಸ್ಫೋಟಿಸಿದೆ.

Click

https://newsnotout.com/2024/11/ipl-kannada-news-rishab-panth-kannada-news-viral-issue-ipl-bidding/
https://newsnotout.com/2024/11/kannada-news-business-man-and-live-in-relationship-issue/
https://newsnotout.com/2024/11/mysore-chamundeshwari-gold-ratha-kannada-news/
https://newsnotout.com/2024/11/kollur-kantara-kannada-news-mini-bus-viral-news-kdd/

Related posts

ಅಮ್ಮ-ಮಗನ ಒಂದು ಮಾಡಿದ, ಗೋವಿಗೊಂದು ನೆಲೆ ಕಲ್ಪಿಸಿದ ‘ನ್ಯೂಸ್ ನಾಟೌಟ್’ ಗೆ ಮತ್ತೊಬ್ಬ ಮಹಿಳೆಯಿಂದ ಅಕ್ಷರ ಹಾರೈಕೆ, ಬೆಂಗಳೂರಿನಿಂದ ರಶ್ಮಿ ಗೋಖಲೆ ಬರೆದ ಅಂಕಣ ಇಲ್ಲಿದೆ ಓದಿ..

ನಿಧಿಯ ಆಸೆಗಾಗಿ ಶಿವಲಿಂಗವನ್ನೇ ಧ್ವಂಸ ಮಾಡಿ ಹೊತ್ತೊಯ್ದರು..!ಇದು ಮೂರನೆ ಬಾರಿ ನಡೆದ ಕೃತ್ಯ! ಅಷ್ಟಕ್ಕೂ ಗುಡ್ಡ ಪ್ರದೇಶದ ಈ ದೇಗುಲದಲ್ಲಿ ಅಂತದ್ದೇನಿದೆ?

ಮಂಗಳೂರು: ಅಪ್ರಾಪ್ತ ದಲಿತ ಯುವತಿಗೆ ಲೈಂಗಿಕ ಕಿರುಕುಳ..! ರಿಕ್ಷಾ ಚಾಲಕ ರಝೀನ್ ಬಾಡಿಗೆ ಮನೆಗೆ ಕರೆದೊಯ್ದಿದ್ದ ಎಂದ ಯುವತಿ!