ಸುಳ್ಯ

ಸುಳ್ಯದಲ್ಲಿ ಸೆವೆಂತ್‌ ಹೆವೆನ್ ಕೇಕ್‌ ಶಾಪ್‌ ಶುಭಾರಂಭ

ನ್ಯೂಸ್‌ನಾಟೌಟ್‌: ವಿವಿಧ ಬಗೆಯ ಕೇಕ್‌ ತಯಾರಿಕೆ ಹಾಗೂ ಗ್ರಾಹಕರ ಮೆಚ್ಚುಗೆ ಗಳಿಸಿರುವ ಪ್ರತಿಷ್ಠಿತ ಸೆವೆಂತ್‌ ಹೆವೆನ್ ಕೇಕ್‌ ಶಾಪ್‌ ಸುಳ್ಯದಲ್ಲಿ ಶುಭಾರಂಭಗೊಂಡಿದೆ.

ಸುಳ್ಯದ ಬಸ್‌ ನಿಲ್ದಾಣ ಬಳಿಯ ಸಿಟಿ ಸೆಂಟರ್‌ನಲ್ಲಿ ಶನಿವಾರ ಸಾಯಂಕಾಲ ಸೆವೆಂತ್‌ ಹೆವೆನ್‌ನ ನೂತನ ಶಾಖೆಯನ್ನು ಸುಳ್ಯ ಚರ್ಚ್‌ನ ಧರ್ಮಗುರು ಫಾದರ್‌ ವಿಕ್ಟರ್‌ ಡಿಸೋಜ, ಚೆನ್ನಕೇಶವ ದೇವಾಲಯದ ಅರ್ಚಕರು ಹರಿಕೃಷ್ಣ ಬಿಲಾಲ್‌ ಮತ್ತು ಜುಮಾ ಮಸೀದಿಯ ಉಸ್ತಾದ್‌ ಲತೀಫ್‌ ಉದ್ಘಾಟಿಸಿ ಶುಭಹಾರೈಸಿದರು. ಸೆವೆಂತ್‌ ಹೆವೆನ್‌ ಸಂಸ್ಥೆಯ ಮಾಲಕರು ಸಂಜೀವ್ ಶೆಟ್ಟಿ, ರಂಜಿತ್ ಶೆಟ್ಟಿ, ಮನೆಯವರು ಮತ್ತು ಗೆಳೆಯರು ಹಿತೈಷಿಗಳು ಉಪಸ್ಥಿತರಿದ್ದರು.

ಗ್ರಾಹಕರ ಬೇಡಿಕೆಗನುಗುಣವಾದ ವಿವಿಧ ವಿನ್ಯಾಸದ, ಬೇರೆ ಬೇರೆ ಫ್ಲೇವರ್‌ಗಳ ಕೇಕ್‌ಗಳನ್ನು ತಯಾರಿಸಿಕೊಡಲಾಗುತ್ತದೆ. ಹುಟ್ಟು ಹಬ್ಬ, ವಿಶೇಷ ದಿನಗಳ ಆಚರಣೆಗೆ ಬೇಕಾದ ಕೇಕ್‌ಗಳು ಮಿತದರದಲ್ಲಿ ಲಭ್ಯವಿದೆ. ವೆರೈಟಿ ಮತ್ತು ವೆಜ್ ಕೇಕ್‌ಗಳು ಲಭ್ಯವಿದೆ. ಅಲ್ಲದೆ ಹುಟ್ಟು ಹಬ್ಬ , ವಿಶೇಷ ದಿನ ಆಚರಿಸುವವರಿಗೆ ಸ್ಪೆಷಲ್ ಸ್ಟೈಲ್ ರೂಂ ಕಲ್ಪಿಸಲಾಗಿದೆ. ಸೆವೆಂತ್‌ ಹೆವೆನ್‌ ಬೇಕರಿ ಈಗಾಗಲೇ 110 ನಗರಗಳಲ್ಲಿ 250ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ.

Related posts

ಸಂಪಾಜೆ ದರೋಡೆ ಪ್ರಕರಣದ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಸುಳ್ಯ ಪೊಲೀಸರು, ಸುಳ್ಯದಿಂದ ತಪ್ಪಿಸಿಕೊಂಡು ತಮಿಳುನಾಡಿನಲ್ಲಿ ಮಾರುವೇಷದಲ್ಲಿದ್ದ ಬೇಟೆಗಾರನ ಹಿಡಿದ ರಣಬೇಟೆಗಾರರು..!

ಸುಳ್ಯ: ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ತಿಲಕ ನವೀನ್‌ ಅಮೋಘ ಸಾಧನೆ..!,ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಮರ್ಕಂಜದ ಪ್ರತಿಭೆ

ಸುಳ್ಯ : ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಸಮ್ಮರ್ ಕ್ಯಾಂಪ್‌ಗೆ ಚಾಲನೆ,ನೂರಾರು ವಿದ್ಯಾರ್ಥಿಗಳು ಭಾಗಿ