ಕರಾವಳಿಕ್ರೀಡೆ/ಸಿನಿಮಾವೈರಲ್ ನ್ಯೂಸ್ಸಿನಿಮಾ

ಕನ್ನಡ ಸಿನಿಮಾ ಜಪಾನ್ ನಲ್ಲಿ ಬಿಡುಗಡೆ, ‘777 ಚಾರ್ಲಿ’ ಗೆ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ನಲ್ಲೂ ಬೇಡಿಕೆ

163

ನ್ಯೂಸ್ ನಾಟೌಟ್: ಭಾರತದಲ್ಲಿ ‘777 ಚಾರ್ಲಿ’ (777 Charlie) ಸಿನಿಮಾ ಬಹಳ ಮೋಡಿ ಮಾಡಿತ್ತು. ಪ್ರಾಣಿಪ್ರಿಯರು ಈ ಸಿನಿಮಾ ನೋಡಿ ಖುಷಿಪಟ್ಟಿದ್ದರು. ತುಳುನಾಡಿನ ನಟ ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದರು. ‘ಪರಂವಃ ಸ್ಟುಡಿಯೋಸ್’ ಮೂಲಕ ನಿರ್ಮಾಣವಾದ ‘777 ಚಾರ್ಲಿ’ ಸಿನಿಮಾ ತಂಡದಿಂದ ಒಂದು ವಿಶೇಷ ಸುದ್ದಿ ಕೇಳಿಬಂದಿದೆ. ಈಗ ಜಪಾನ್​ನಲ್ಲಿ ಈ ಚಿತ್ರ ಬಿಡುಗಡೆ ಆಗಲು ಸಿದ್ಧವಾಗಿದೆ.

ಕನ್ನಡದ ಈ ಸಿನಿಮಾ ಜಪಾನೀಸ್​ ಭಾಷೆಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ. ಜೂನ್ 28ರಂದು ಜಪಾನ್ (Japan) ದೇಶದ ಹಲವು ನಗರಗಳಲ್ಲಿ ‘777 ಚಾರ್ಲಿ’ ರಿಲೀಸ್​ ಆಗಲಿದೆ ಎಂದು ವರದಿ ತಿಳಿಸಿದೆ. ಬಾಲಿವುಡ್​ ಹಾಗೂ ಟಾಲಿವುಡ್ ​ನ ಸಿನಿಮಾಗಳು ಜಪಾನ್​ನಲ್ಲಿ ಬಿಡುಗಡೆ ಆಗಿ ಯಶಸ್ಸು ಕಂಡಿದ್ದವು. ಈಗ ಕನ್ನಡದ ಒಂದು ಸಿನಿಮಾ ಜಪಾನ್​ನಲ್ಲಿ ತೆರೆ ಕಾಣಲು ಸಜ್ಜಾಗಿರುವುದು ಹೆಮ್ಮೆಯ ವಿಷಯ. ಜಪಾನ್ ಚಿತ್ರರಂಗದ ದೊಡ್ಡ ಸಂಸ್ಥೆ ‘ಶೋಚಿಕೋ ಮೂವೀ’ ಕಿರಣ್​ ರಾಜ್​ ನಿರ್ದೇಶನದ ‘777 ಚಾರ್ಲಿ’ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲು ಮುಂದಾಗಿದೆ.

ಈ ಹಿಂದೆ ಇದೇ ಸಂಸ್ಥೆ ‘Hachi: A Dog’s Tale’ ಸಿನಿಮಾವನ್ನು ಜಪಾನಿನಲ್ಲಿ ವಿತರಣೆ ಮಾಡಿ ಗಮನ ಸೆಳೆದಿತ್ತು. 2023ರಲ್ಲಿ ‘777 ಚಾರ್ಲಿ’ ಸಿನಿಮಾ ಥೈಲ್ಯಾಂಡ್​ನಲ್ಲಿ ಡಬ್ ಆಗಿ ತೆರೆಕಂಡಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ‘ಬಿಗ್​ ಬಾಸ್​’ ಖ್ಯಾತಿಯ ಸಂಗೀತಾ ಶೃಂಗೇರಿ ಅವರು ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

See also  ಸಂಸದ ಪ್ರತಾಪ್ ಸಿಂಹ ಕಚೇರಿಗೆ ಮುತ್ತಿಗೆ..? ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದಂದೇ ನಡೆಯಿತಾ ಅಚಾತುರ್ಯ?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget