ನ್ಯೂಸ್ ನಾಟೌಟ್: ಈಶಾನ್ಯ ಇಂಗ್ಲೆಂಡ್ ನ ಲೀಸೆಸ್ಟರ್ ನಲ್ಲಿರುವ ತಮ್ಮ ನಿವಾಸದಲ್ಲಿ 76 ವರ್ಷದ ತಾಯಿಯನ್ನು ಹೊಡೆದು ಕೊಂದ ಅಪರಾಧದಡಿ ಭಾರತ ಮೂಲದ 46 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮೇ 13ರಂದು ಹತ್ಯೆಯಾದ ವೃದ್ಧೆ ಭಜನ್ ಕೌರ್ ಎಂಬಾಕೆಯ ಮೃತದೇಹವನ್ನು ಪತ್ತೆ ಮಾಡಿದ್ದ ಪೊಲೀಸರು ಮಗ ಸಂದೀಪ್ ಸಿಂಗ್ ಅವರನ್ನು ಬಂಧಿಸಿದ್ದರು. ಭಜನ್ ಕೌರ್ ಅವರ ಮುಖ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿರುವುದು ಕಂಡುಬಂದಿತ್ತು.
16 ದಿನಗಳ ಸತತ ವಿಚಾರಣೆಯಲ್ಲಿ ಸಂದೀಪ್ ಸಿಂಗ್ ದೋಷಿ ಎಂದು ಲೀಸೆಸ್ಟರ್ ಕ್ರೋನ್ ನ್ಯಾಯಾಲಯ ತೀರ್ಮಾನಿಸಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. 31 ವರ್ಷಗಳು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಸಂದೀಪ್ ಪೆರೋಲ್ ಗೆ ಅರ್ಹರಾಗುತ್ತಾರೆ ಎನ್ನಲಾಗಿದೆ.
‘ತನ್ನ ತಾಯಿಯನ್ನು ಕೊಂದ ನಂತರ, ಸಿಂಗ್ ಹೊರಗೆ ಹೋಗಿ ಗೋಣಿಚೀಲ ಮತ್ತು ಗುದ್ದಲಿಯನ್ನು ಖರೀದಿಸಿದ್ದರು. ತಾಯಿ ಕೌರ್ ಅವರ ಮೃತದೇಹವನ್ನು ತೋಟದಲ್ಲಿ ಹೂಳಲು ಉದ್ದೇಶಿಸಿದ್ದರು. ಆದರೆ, ಗೊಂದಲಕ್ಕೊಳಗಾಗಿ ಕೈಬಿಟ್ಟಿದ್ದರು. ಹತ್ಯೆ ಬಳಿಕ ಮನೆಯನ್ನು ಶುಚಿಗೊಳಿಸಲಾಗಿದೆ. ಸಾಕ್ಷ್ಯ ನಾಶದ ಆರೋಪವೂ ಇತ್ತು.
ಈ ಸಂಬಂಧ ಅಧಿಕಾರಿಗಳು ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ಸುಳ್ಳು ವಿವರಗಳನ್ನು ನೀಡಿದ್ದರು. ತಾಯಿ ಸಾವಿನ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದರು ಎಂದು ಡಿಟೆಕ್ಟಿವ್ ಹೇಳಿದ್ದಾರೆ. ತಂದೆ ತಮಗೆ ಬಿಟ್ಟುಹೋಗಿದ್ದ ಮನೆಯ ಮಾಲೀಕತ್ವದ ವಿಚಾರವಾಗಿ ಜಗಳ ನಡೆದು, ಹತ್ಯೆ ನಡೆದಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
Click