ಕ್ರೈಂವೈರಲ್ ನ್ಯೂಸ್

750 ಕೋಟಿ ರೂ ತುಂಬಿದ್ದ ಟ್ರಕ್‌ ಪತ್ತೆಯಾಗಿದ್ದು ಎಲ್ಲಿ..? ತನಿಖೆಯಲ್ಲಿ ಬಯಲಾದ ರಹಸ್ಯವೇನು?

295

ನ್ಯೂಸ್ ನಾಟೌಟ್: ವಿಧಾನಸಭೆ ಚುನಾವಣೆ ನಡೆಯುತ್ತಿರುವ ತೆಲಂಗಾಣದಲ್ಲಿ ಯಥೇಚ್ಛವಾಗಿ ಮತದಾರರಿಗೆ ಹಣ ಹಂಚಿಕೆ ಯತ್ನಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತವೆ ಮತ್ತು ಕರ್ನಾಟಕದಿಂದಲೂ ಹಣ ಹರಿದುಹೋಗುತ್ತದೆ ಎನ್ನಲಾಗಿದೆ, ಈ ಮಧ್ಯೆ 750 ಕೋಟಿ ರು. ನಗದು ತುಂಬಿದ್ದ ಟ್ರಕ್‌ ಒಂದು ಪತ್ತೆಯಾಗಿದೆ.

750 ಕೋಟಿ ರೂಪಾಯಿ ತುಂಬಿದ ಟ್ರಕ್ ಪತ್ತೆಯಾಗಿರುವುದು ತೆಲಂಗಾಣದ (Telangana) ಗದ್ವಾಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂದು ಗೊತ್ತಾಗಿದೆ ಮತ್ತು ಗುರುವಾರ ಪತ್ತೆಯಾದ ಟ್ರಕ್ಕನ್ನು ಚುನಾವಣಾ ಸಿಬ್ಬಂದಿ ತಡೆದಿದ್ದರು.

ಆಗ ಅದರಲ್ಲಿ 750 ಕೋಟಿ ರೂ. ಪತ್ತೆಯಾಯಿತು. ಕೂಡಲೇ ಚುನಾವಣಾ ಸಿಬ್ಬಂದಿಯು ಪೊಲೀಸರು, ಬ್ಯಾಂಕ್‌ ಸಿಬ್ಬಂದಿ ಹಾಗೂ ಇತರ ಸಂಬಂಧಿಸಿದ ಸಿಬ್ಬಂದಿಯನ್ನು ಕರೆದರು. ಬಳಿಕ ವಿಚಾರಣೆ ನಡೆಸಿದಾಗ, ಇದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಸೇರಿದ ಹಣ. ಕೇರಳದಿಂದ ಹೈದರಾಬಾದ್‌ಗೆ ಸಾಗಿಸಲಾಗುತ್ತಿತ್ತು ಎಂದು ಎಂದು ದೃಢಪಟ್ಟಿತು. ನಂತರ ಪೊಲೀಸರು ಟ್ರಕ್‌ಗೆ ಪ್ರಯಾಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು.

ಆದರೆ ಸಾಕಷ್ಟು ಪರಿಶೀಲನೆ ನಂತರ ಇದು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣವಲ್ಲ. ಕೇಂದ್ರ ಸರ್ಕಾರದ ಅಧೀನದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಸೇರಿದ ಹಣ ಎಂದು ಗೊತ್ತಾಗಿ ಸಂದೇಹಗಳಿಗೆ ತೆರೆ ಬಿದ್ದಿದೆ.

ರಾಜ್ಯಾದ್ಯಂತ ಚುನಾವಣೆ ಘೋಷಿಸಿದ ಬಳಿಕ ಈವರೆಗೆ ನಗದು ಸೇರಿ ಒಟ್ಟು 165 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ನಗದು, ಮದ್ಯ, ಡ್ರಗ್ಸ್, ಚಿನ್ನ ಮತ್ತು ಅಮೂಲ್ಯ ರತ್ನಗಳು ಸೇರಿವೆ. ವಶಪಡಿಸಿಕೊಂಡ ಚಿನ್ನ, ವಜ್ರ ಮತ್ತು ಅಮೂಲ್ಯ ಲೋಹಗಳ ಮೌಲ್ಯ 62 ಕೋಟಿ ರು.ಗಳಾಗಿದ್ದು, ನಗದು ಮೊತ್ತ 77 ಕೋಟು ರೂ ಆಗಿದೆ ಎಂದು ವರದಿ ತಿಳಿಸಿದೆ.

See also  ಕಾರ್ಕಳ: ಅತ್ಯಾಚಾರ ಪ್ರಕರಣದ 3ನೇ ಆರೋಪಿ ಬಂಧನ.! ಡ್ರಗ್ಸ್​​ ವಿರೋಧಿ ಅಭಿಯಾನದಲ್ಲಿ ಇದ್ದವನೇ ಡ್ರಗ್ಸ್ ಪೂರೈಸಿದ್ದ..! ಬಂಧಿತ ಆರೋಪಿ ಬಿಜೆಪಿ ಕಾರ್ಯಕರ್ತ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget