ಕರಾವಳಿಕೊಡಗುರಾಜಕೀಯ

‘ನನ್ನನ್ನು ಪ್ರೀತಿಸಿ ಮದುವೆಯಾಗೋದಾಗಿ ಹೇಳಿ ನಂಗೆ ಕೈ ಕೊಟ್ಟಿದ್ದಾನೆ’,73ರ ವೃದ್ಧನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ 63ರ ವೃದ್ದೆ..! :ಅಜ್ಜಿಗೆ ಅಜ್ಜ ಕೈ ಕೊಟ್ಟಿದ್ದಾದರೂ ಏನಕ್ಕೆ ?

205

ನ್ಯೂಸ್ ನಾಟೌಟ್ : ಹದಿಹರೆಯದ ಕೆಲ ಯುವಕ ಯುವತಿಯರು ಪ್ರೀತಿಗೆ ಕೈ ಕೊಟ್ಟು ಇನ್ನೊಬ್ಬ ಯುವಕ ಅಥವಾ ಯುವತಿ ಜತೆ ಪ್ರೀತಿ ಬೆಳೆಸಿರುವುದರ ಬಗ್ಗೆ ಅನೇಕ ಕಥೆಗಳನ್ನು ಕೇಳಿದ್ದೇವೆ.ಇದು ಸಾಮಾನ್ಯ ಕೂಡ.ಆದರೆ ಇಲ್ಲೊಬ್ಬರು 70 ವಯಸ್ಸಿನ ಅಜ್ಜ ೬೩ ವಯಸ್ಸಿನ ಅಜ್ಜಿಯನ್ನು ಪ್ರೀತಿಸಿ ಮದುವೆ ಆಗೋದಾಗಿ ನಂಬಿಸಿ ಕೊನೆಗೆ ಕೈಕೊಟ್ಟಿದ್ದಾನೆಂದು ಅಜ್ಜಿ ಪೊಲೀಸ್ ಮೆಟ್ಟಿಲೇರಿದ ಘಟನೆ ವರದಿಯಾಗಿದೆ.

ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆಶ್ಚರ್ಯವೆಂಬಂತಿದೆ. ಇದು ಅಜ್ಜ ಅಜ್ಜಿಯ ಪ್ರೇಮ ಕಹಾನಿ.ತನ್ನನ್ನು ಪ್ರೀತಿಸಿ ಮದ್ವೆಯಾಗೋದಾಗಿ ವಂಚಿಸಿದ್ದಾನೆಂದು ಅಜ್ಜಿ ಇದೀಗ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾರ್ವಜನಿಕರಿಗೆ ನ್ಯಾಯ ಕೊಡಿಸುತ್ತಿರುವ ಪೊಲೀಸರೇ ನೀವು ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಅಂದ ಹಾಗೆ ಈ ಅಜ್ಜಿಯ ಹೆಸರು ದಯವಾಣಿ (63). ಲೋಕನಾಥನ್ ಎಂಬ ವೃದ್ಧ ಪ್ರೀತಿಸಿ ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಆರಂಭದಲ್ಲಿ ವೃದ್ಧರಿಬ್ಬರು ವಾಯು ವಿಹಾರ ಮಾಡುವಾಗ ಪರಿಚಯ ಆಗಿತ್ತಂತೆ. ಇಬ್ಬರ ಪರಿಚಯವೂ ಪ್ರೀತಿಗೆ ತಿರುಗಿತ್ತು. ಹಲವು ತಿಂಗಳು ಪ್ರೇಮಿಗಳಂತೆ ಸಿನಿಮಾ, ಪಾರ್ಕ್ ಎಂದು ವೃದ್ಧ ಪ್ರೇಮಿಗಳು ಓಡಾಟವನ್ನೂ ಮಾಡಿದ್ದಾರೆ.ಒಂದಷ್ಟು ಸ್ಥಳಗಳಿಗೆ ತೆರಳಿ ಪ್ರೇಕ್ಷಣೀಯ ಸ್ಥಳಗಳನ್ನೂ ವೀಕ್ಷಿಸಿದ್ದಾರೆ.ಆದರೆ ಬರಬರತ್ತಾ ಯಾಕೋ ವೃದ್ದ ಲೋಕನಾಥನ್ ಉಲ್ಟಾ ಹೊಡೆದಿದ್ದಾರೆ.ದಯಾವಣಿಯನ್ನ ಕ್ರಮೇಣ ಅವಾಯ್ಡ್ ಮಾಡುವುದಕ್ಕೆ ಆರಂಭ ಮಾಡಿದ್ದಾರೆ. ಈ ಸಂಬಂಧ ಪ್ರಶ್ನೆ ಮಾಡಿದಕ್ಕೆ ಅಜ್ಜಿಗೆ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತನ್ನಿಂದ ದೂರ ಸರಿಯುತ್ತಿರುವ ಬಗ್ಗೆ ದಯವಾಣಿ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕರೆದಾಗ ಹೋಗಿಲ್ಲ ಎನ್ನುವ ಕಾರಣಕ್ಕೆ ಕೆಟ್ಟ ಶಬ್ಧ ಬಳಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿರುವ ಆರೋಪ ಕೂಡಾ ಇವರ ವಿರುದ್ದ ಮಾಡಲಾಗಿದೆ. ಆದರೆ, ಈಗ ಸದ್ಯ ಮದ್ವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ವೃದ್ದನ ವಿರುದ್ದ ದೂರು ದಾಖಲಿಸಲಾಗಿದೆ. ಈ ಸಂಬಂಧ ಈಸ್ಟ್ ಝೋನ್ ವುಮೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದ್ದು, ಪೊಲೀಸರಿಗೆ ಈ ಪ್ರಕರಣದ ವಿಚಾರಣೆ ಜತೆಗೆ ನ್ಯಾಯ ಕೊಡಿಸುವುದೇ ದೊಡ್ಡ ತಲೆನೋವಿಗೆ ಕಾರಣವಾಗಿದೆ.

See also  ಮಡಿಕೇರಿ: ಸಾಲು ಸಾಲು ರಜೆ ಹಿನ್ನಲೆ ,ಕೊಡಗಿನ ಪ್ರವಾಸಿ ತಾಣಗಳಲ್ಲಿ ಜನವೋ ಜನ..!
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget