ಕರಾವಳಿ

ಮಂಗಳೂರು: 2.70 ಲಕ್ಷ ರೂ. ಮೌಲ್ಯದ ಇ-ಸಿಗರೇಟ್​​ಗಳು ಜಪ್ತಿ:ನಾಲ್ವರು ಸೆರೆ

166

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ(Mangalore)ಲ್ಲಿ ವಿದೇಶಿ ಸಿಗರೇಟ್ ಮತ್ತು ಇ- ಸಿಗರೇಟ್‌ಗಳನ್ನು ಜಪ್ತಿ ಮಾಡಲಾಗಿದೆ.ಲಾಲ್​ಬಾಗ್ ಬಳಿಯ ಕಾಂಪ್ಲೆಕ್ಸ್ ಅಂಗಡಿಗಳಿಗೆ ಬರ್ಕೆ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ 2.70 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್ ಮತ್ತು ಇ -ಸಿಗರೇಟ್‌ಗಳು (E-Cigarettes) ಪತ್ತೆಯಾಗಿದೆ. ಈ ಹಿನ್ನಲೆ ಮಂಗಳೂರಿನ ಮಣ್ಣಗುಡ್ಡೆಯ ಸ್ವಾತಿ(26), ಶಿವಕುಮಾರ್(34), ಕುತ್ತಾರು ಪದವಿನ ಹಸನ್ ಶರೀಫ್(50) ಹಾಗೂ ರೆಹಮತುಲ್ಲಾ(45) ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  'ನ್ಯೂಸ್ ನಾಟೌಟ್' ವರದಿ ಬೆನ್ನಲ್ಲೇ ತಾತ್ಕಾಲಿಕವಾಗಿ ಪುಟ್ ಪಾತ್ ಸರಿಪಡಿಸಿದ ಅಧಿಕಾರಿಗಳು..! ನಾಳೆಯೇ ಸ್ಲ್ಯಾಬ್ ಹಾಕಿ ಶಾಶ್ವತ ಪರಿಹಾರ ನೀಡುವ ಭರವಸೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget