ಕರಾವಳಿದೇಶ-ವಿದೇಶವೈರಲ್ ನ್ಯೂಸ್

7 ವರ್ಷದ ಬಾಲಕನನ್ನು ವಾಮಾಚಾರಕ್ಕೆ ಬಲಿಕೊಟ್ಟ ಶಾಲೆಯ ಆಡಳಿತ ಮಂಡಳಿ..! ಶಾಲೆಯ ನಿರ್ದೇಶಕ ಮತ್ತು 3 ಶಿಕ್ಷಕರು ಸೇರಿದಂತೆ 5 ಮಂದಿ ಅರೆಸ್ಟ್..!

191

ನ್ಯೂಸ್ ನಾಟೌಟ್ : ಶಾಲೆಯೊಂದು ತನ್ನ ಹಾಸ್ಟೆಲ್‌ನಲ್ಲಿ ಓದುತ್ತಿದ್ದ 7 ವರ್ಷದ ಬಾಲಕನ್ನು ಕೊಲೆ ಮಾಡಿದೆ ಎಂದು ಪೊಲೀಸರು ಗುರುವಾರ(ಸೆ.27) ಮಾಹಿತಿ ಬಹಿರಂಗ ಪಡಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿರುವ ಹಾಸ್ಟೆಲ್ ವೊಂದರಲ್ಲಿ ನಡೆದಿದೆ.

ವಾಮಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಸ್‌ಗವಾನ್‌ನ ಡಿಎಲ್ ಪಬ್ಲಿಕ್ ಸ್ಕೂಲ್‌ನ ನಿರ್ದೇಶಕ, ಮೂವರು ಶಿಕ್ಷಕರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಕೆಲ ತಿಂಗಳ ಹಿಂದೆಯೂ ಕೂಡ ಒಂದು ಮಗುವನ್ನು ಬಲಿಕೊಡುವ ಯತ್ನ ನಡೆದಿತ್ತು ಎನ್ನಲಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಶಾಲೆಗೆ ಕೀರ್ತಿ ಮತ್ತು ಯಶಸ್ಸನ್ನು ತರಲು ಉದ್ದೇಶಿಸಲಾದ ಆಚರಣೆಯಲ್ಲಿ ಮಗುವನ್ನು ಬಲಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶಂಕಿತರನ್ನು ಶಾಲಾ ನಿರ್ದೇಶಕ ದಿನೇಶ್ ಬಘೇಲ್, ಅವರ ತಂದೆ ಜಶೋಧನ್ ಸಿಂಗ್ ಮತ್ತು ಶಿಕ್ಷಕರಾದ ಲಕ್ಷ್ಮಣ್ ಸಿಂಗ್, ವೀರಪಾಲ್ ಸಿಂಗ್ ಮತ್ತು ರಾಮಪ್ರಕಾಶ್ ಸೋಲಂಕಿ ಎಂದು ಪೊಲೀಸರು ಗುರುತಿಸಿದ್ದಾರೆ. ವರದಿಯ ಪ್ರಕಾರ, ಮಾಟಮಂತ್ರವನ್ನು ನಂಬಿದ್ದ ಜಶೋಧನ್ ಸಿಂಗ್ ತನ್ನ ಮಗ ಮತ್ತು ಶಿಕ್ಷಕರಿಗೆ ಶಾಲೆಯ ಮಗುವೊಂದನ್ನು ಬಲಿ ಕೊಡುವುದರಿಂದ ಶಾಲೆಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ ಎಂದು ತಿಳಿಸಿದ್ದರು. ಅದರಂತೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿಸಿದ್ದಾರೆ.

ಸುಮಾರು 600 ವಿದ್ಯಾರ್ಥಿಗಳನ್ನು ಈ ಶಾಲೆಯ ಹೊಂದಿದ್ದು, ಪುಟ್ಟ ಮಕ್ಕಳನ್ನೂ ಕೂಡ ತನ್ನ ಹಾಸ್ಟೆಲ್‌ನಲ್ಲಿ ಇರಿಸಿಕೊಳ್ಳಲಾಗಿದೆ. ಬಲಿಯಾಗಿರುವ ಬಾಲಕ ಕೂಡ ಇದೇ ಹಾಸ್ಟೆಲ್‌ನಲ್ಲಿದ್ದ ಎನ್ನಲಾಗಿದೆ.

Click

https://newsnotout.com/2024/09/police-112-call-and-ask-for-help-for-travelling-to-program-kannada-news/
https://newsnotout.com/2024/09/temple-for-actor-puneeth-rajkumar-and-ashwini-innaguarated/
https://newsnotout.com/2024/09/actor-darshan-faces-income-tax-investigation-on-case-kannada-news/
See also  ಉಳ್ಳಾಲ: 12 ವರ್ಷದ ಬಾಲಕಿಯನ್ನು 6 ತಿಂಗಳ ಗರ್ಭವತಿಯನ್ನಾಗಿಸಿದವ ಅರೆಸ್ಟ್, ಒಬ್ಬಳೇ ಇದ್ದ ಸಮಯದಲ್ಲಿ ಅತ್ಯಾಚಾರ ನಡೆಸಿದ ದೂರು ದಾಖಲು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget