ಕರಾವಳಿ

ಬಾಲಕಿ ಮೇಲೆ ನಿರಂತರ ಅತ್ಯಾಚಾರ; ವೃದ್ಧನಿಗೆ 81 ವರ್ಷ ಜೈಲು ಶಿಕ್ಷೆ

ಇಡುಕ್ಕಿ: ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕ ರಣಕ್ಕೆ ಸಂಬಂಧಿಸಿದಂತೆ ಕೇರಳದ ತ್ವರಿತಗತಿ ನ್ಯಾಯಾಲಯವು 66 ವರ್ಷದ ವ್ಯಕ್ತಿಯೊಬ್ಬರಿಗೆ 81 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ. 

ಇದರ ಜತೆಗೆ ಅಪರಾಧಿಗೆ ₹ 2.2 ಲಕ್ಷ ದಂಡವನ್ನೂ ವಿಧಿಸಿ ಪೋಕ್ಸೊ ಪ್ರಕ ರಣಗಳ ವಿಶೇಷ ನ್ಯಾಯಾಧೀಶ ಟಿ.ಜಿ. ವರ್ಗೀಸ್  ಆದೇಶಿಸಿದ್ದಾರೆ.  ಶಿಕ್ಷೆಯನ್ನು ಅಪರಾಧಿ ಏಕಕಾಲದಲ್ಲಿ ಅನುಭವಿಸಬೇಕಾಗಿದೆ. 2020ರ ಅಕ್ಟೋಬರ್ ನಲ್ಲಿ ಬಾಲಕಿ ಆಸ್ಪತ್ರೆಗೆ ದಾಖಲಾದಾಗ, ಆಕೆ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಆಗ ಬಾಲಕಿಗೆ 15 ವರ್ಷ ವಾಗಿತ್ತು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು. ಸಂತ್ರಸ್ತೆಯ ಹೇಳಿಕೆ ಮತ್ತು ಗರ್ಭಪಾತದ ಬಳಿಕ ಭ್ರೂಣದಿಂದ ಸಂಗ್ರಹಿಸಿದ ಡಿಎನ್ಎ ಪುರಾವೆಗಳ ಆಧಾರದ ಮೇಲೆ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲಾಗಿದೆ.

Related posts

ಅಪಾಯದಲ್ಲಿ ಕೈಪಡ್ಕ ಸೇತುವೆ

ಪೆರಾಜೆ: ಕಾಡು ಪ್ರಾಣಿ ಬೇಟೆಯಾಡಿದವನನ್ನೇ ಬೇಟೆಯಾಡಿದ ಅರಣ್ಯ ಇಲಾಖೆ..! ಸಂಪಾಜೆ ವಲಯ ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ವಿಡಿಯೋ ವೀಕ್ಷಿಸಿ

ಪುತ್ತೂರಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಹಾಲು ಪ್ಯಾಕಿಂಗ್ ಘಟಕ ನಿರ್ಮಾಣ