ಕ್ರೈಂವೈರಲ್ ನ್ಯೂಸ್

6 ಲಕ್ಷ ಮೊಬೈಲ್‌ ನಂಬರ್ ಬಂದ್, 65 ಸಾವಿರ ವೆಬ್ ಸೈಟ್ ಲಿಂಕ್ ಗಳು ಬ್ಲಾಕ್..! 8 ಲಕ್ಷ 50 ಸಾವಿರ ಮಂದಿಗೆ ಸೈಬರ್ ದಾಳಿಯಿಂದ ರಕ್ಷಣೆ..! ಏನಿದು ಪ್ರಕರಣ..?

ನ್ಯೂಸ್ ನಾಟೌಟ್ : ಕೇಂದ್ರ ಗೃಹ ಸಚಿವಾಲಯದ ಸೈಬರ್ ವಿಭಾಗ 14C ಎಂಬ ಸೈಬರ್ ದಾಳಿಗಳನ್ನು ಭೇದಿಸಲು ಸತತವಾಗಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಒಟ್ಟು 6 ಲಕ್ಷ ಮೊಬೈಲ್ ನಂಬರ್ ಹಾಗೂ ವಂಚನೆ ಮಾಡುತ್ತಿರುವ 65 ಸಾವಿರ ಯುಆರ್‌ಎಲ್‌ (ಲಿಂಕ್‌) ಬ್ಲಾಕ್ ಮಾಡಲು ಸೈಬರ್ ಸೆಲ್ ಗೆ ಆದೇಶ ಹೊರಡಿಸಿದೆ. ವಂಚನೆಗಳಲ್ಲಿ ತೊಡಗದ್ದ 800 ಅಪ್ಲಿಕೇಷನ್‌ಗಳನ್ನು (App) ಸಹ ಬ್ಲಾಕ್ ಮಾಡಲಾಗಿದೆ.

2023ರಲ್ಲಿ NCRPಗೆ (National Cyber Crime Reporting Portal) 1 ಲಕ್ಷಕ್ಕೂ ಅಧಿಕ ಇನ್ವೆಸ್ಟ್‌ಮೆಂಟ್ ಸ್ಕ್ಯಾಮ್ ಸಂಬಂಧ ದೂರುಗಳು ಸಲ್ಲಿಕೆಯಾಗಿದ್ದವು. ಇಡೀ ದೇಶದದ್ಯಂತ ಸೈಬರ್ ಕ್ರೈಂ ಸಂಬಂಧ ಅಂದಾಜು 17 ಸಾವಿರ ಎಫ್‌ಐಆರ್ ದಾಖಲಾಗಿವೆ. ಇನ್ನು ಜನವರಿ 2024 ರಿಂದ ಸೆಪ್ಟೆಂಬರ್ 2024ರವರೆಗೆ ಡಿಜಿಟಲ್ ಅರೆಸ್ಟ್ 6000, ಟ್ರೇಡಿಂಗ್ ಸ್ಕ್ಯಾಮ್ 20,043, ಇನ್ವೆಸ್ಟ್‌ಮೆಂಟ್ ಸ್ಕ್ಯಾಮ್ 62,687 ಮತ್ತು ಡೇಟಿಂಗ್ ಸ್ಕ್ಯಾಮ್ 1725 ದೂರುಗಳು ದಾಖಲಾಗಿವೆ.

ಕಳೆದ ನಾಲ್ಕು ತಿಂಗಳಲ್ಲಿ 3.25 ಲಕ್ಷ ವಂಚನೆ ಮಾಡುವ ಅಕೌಂಟ್‌ಗಳ ಡೆಬಿಟ್ ಫ್ರೀಜ್ ಮಾಡಲಾಗಿದೆ. ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ ಅಥವಾ ತೊಡಗಿಕೊಂಡಿರುವ 3401 ಸೋಶಿಯಲ್ ಮೀಡಿಯಾ, ವೆಬ್‌ಸೈಟ್ ಮತ್ತು ವಾಟ್ಸಪ್ ಗ್ರೂಪ್ ಬಂದ್ ಮಾಡಲಾಗಿದೆ. ಕಳೆದ ವರ್ಷದಿಂದ ಸೈಬರ್ ಫ್ರಾಡ್‌ನಿಂದ 2800 ಕೋಟಿ ರೂಪಾಯಿ ಸೇವ್ ಮಾಡಲಾಗಿದೆ. ಗೃಹ ಸಚಿವಾಲಯ 8 ಲಕ್ಷ 50 ಸಾವಿರ ಸಂತ್ರಸ್ತರನ್ನು ಸೈಬರ್ ದಾಳಿಯಿಂದ ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

Click

https://newsnotout.com/2024/09/bike-royal-enfield-kannada-news-viral-news-fire-issue-cigarate/
https://newsnotout.com/2024/09/fir-kannada-news-statement-kananda-news-ganesha-chaturti-issue/
https://newsnotout.com/2024/09/swamiji-rayachuru-kannada-news-satlement-allegation-viral-news/
https://newsnotout.com/2024/09/kamala-harris-cadidate-for-vice-president-kananda-news-fire-on-office/

Related posts

ಮಹಿಳೆಯನ್ನು ಮತಾಂತರಕ್ಕೆ ಯತ್ನಿಸಿದ ಮುಸ್ಲಿಂ ದಂಪತಿ..! ನೇಹಾ ಪ್ರಕರಣದ ಸವದತ್ತಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ

ಪಾದ್ರಿಗೆ ಭಂಗ ತಂದ ಯುವತಿಯರ ಸಂಗ!

ಕಟ್ಟಿಂಗ್ ಮೆಷಿನ್ ತಾಗಿ ಕಾರ್ಮಿಕ ಮೃತ್ಯು