ನ್ಯೂಸ್ ನಾಟೌಟ್: ಇತ್ತೀಚೆಗೆ ವೈರಲ್ ಆದ ಯೂಟ್ಯೂಬ್ ವಿಡಿಯೋವೊಂದು ಮುಂದಿನ ವರ್ಷ ಮಾರ್ಚ್ ನಿಂದ 500 ರೂಪಾಯಿ ನೋಟುಗಳ ಬಳಕೆ ನಿಲ್ಲುತ್ತದೆ ಎಂದು ಹೇಳಿಕೊಂಡಿದೆ. ಆದರೆ, ಕೇಂದ್ರ ಸರ್ಕಾರ ಈ ಹೇಳಿಕೆ ಸುಳ್ಳು ಎಂದಿದೆ.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ ಮತ್ತು 500 ರೂಪಾಯಿ ನೋಟುಗಳು ವಹಿವಾಟುಗಳಿಗೆ ಮಾನ್ಯವಾಗಿ ಮುಂದುವರಿಯುತ್ತವೆ ಎಂದು ಸ್ಪಷ್ಟಪಡಿಸಿದೆ.
‘ಕ್ಯಾಪಿಟಲ್ ಟಿವಿ’ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದು ಮಾರ್ಚ್ 2026 ರ ವೇಳೆಗೆ 500 ರೂ. ನೋಟುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳುವ ಮೂಲಕ ಗೊಂದಲವನ್ನು ಸೃಷ್ಟಿಸಿದೆ. “ಯೂಟ್ಯೂಬ್ ಚಾನೆಲ್ ‘ಕ್ಯಾಪಿಟಲ್ ಟಿವಿ’ (capitaltvind) ನಲ್ಲಿನ ವಿಡಿಯೋವು ಮಾರ್ಚ್ 2026 ರ ವೇಳೆಗೆ ಆರ್ ಬಿಐ 500 ರೂ. ನೋಟುಗಳ ಚಲಾವಣೆಯನ್ನು ಸ್ಥಗಿತಗೊಳಿಸುತ್ತದೆ ಎಂದು ತಪ್ಪಾಗಿ ಹೇಳುತ್ತಿದೆ. ಆರ್‌ಬಿಐ ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ. 500 ರೂ. ನೋಟುಗಳನ್ನು ಸ್ಥಗಿತಗೊಳಿಸಲಾಗಿಲ್ಲ ಮತ್ತು ಅವು ಕಾನೂನುಬದ್ಧವಾಗಿ ಉಳಿಯಲಿದೆ” ಎಂದಿದೆ.
ಮೆಟ್ರೋ ಪಿಲ್ಲರ್ ಗೆ ಗುದ್ದಿದ ಬಿಎಂಟಿಸಿ ಬಸ್..! ಗಾಯಗೊಂಡ 12 ಜನರಲ್ಲಿ ಓರ್ವ ಸಾವು..!