Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

5 ವರ್ಷದ ಬಾಲಕಿಯ ದೇಹ ಗದ್ದೆಯಲ್ಲಿ ತುಂಡು ತುಂಡಾದ ರೀತಿಯಲ್ಲಿ ಪತ್ತೆ..! ಇತರ ಭಾಗಗಳ ಪತ್ತೆಗೆ ಡ್ರೋನ್‌ ಮೂಲಕ ಶೋಧ..!

587

ನ್ಯೂಸ್‌ ನಾಟೌಟ್ : ಉತ್ತರ ಪ್ರದೇಶದ ಮಥುರಾದ ಪೊಲೀಸ್ ಠಾಣೆ ಬಳಿ ಮೈದಾನದಲ್ಲಿ 5 ವರ್ಷದ ಬಾಲಕಿಯ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.25ರಂದು ಬಾಲಕಿ ನಾಪತ್ತೆಯಾಗಿದ್ದಳು. ಫೆ.26ರಂದು ಗದ್ದೆಯೊಂದರಲ್ಲಿ ಬಾಲಕಿಯ ಕಾಲು ಪತ್ತೆಯಾಗಿತ್ತು. ಆರಂಭದಲ್ಲಿ ಕಾಡು ಪ್ರಾಣಿ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿತ್ತು.

ದೇಹದ ಇತರ ಭಾಗಗಳ ಪತ್ತೆಗೆ ಡ್ರೋನ್‌ ಕಣ್ಗಾವಲು ಮೂಲಕ ಶೋಧ ನಡೆಸಿದಾಗ ಮತ್ತೊಂದು ತುಂಡಾದ ಕಾಲು ಮತ್ತು ಮುಂಡ ದೊರಕಿದೆ. ವಿಧಿವಿಜ್ಞಾನ ತಂಡ ಮಾದರಿಗಳನ್ನು ಸಂಗ್ರಹಿಸಿವೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಬಾಲಕಿಯನ್ನು ಕತ್ತು ಹಿಸುಕಿ ಸಾಯಿಸಿರುವುದು ಗೊತ್ತಾಗಿದೆ ಎಂದು ಸೀತಾಪುರದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರವೀಣ್ ರಂಜನ್‌ ಹೇಳಿದ್ದಾರೆ.

 ಇದನ್ನೂ ಓದಿ:ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದಾಕೆ ಸೂಟ್‌ ಕೇಸ್‌ ನಲ್ಲಿ ಶವವಾಗಿ ಪತ್ತೆ..! ಬಸ್‌ ನಿಲ್ದಾಣದ ಬಳಿ ಸಿಕ್ಕ ಸೂಟ್‌ ಕೇಸ್‌..!

ಘಟನೆಯ ಕುರಿತು ಹಲವು ಶಂಕಿತರನ್ನು ವಿಚಾರಣೆ ನಡೆಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆಗೆ ಕಣ್ಗಾವಲು ತಂಡ ನಿಯೋಜಿಸಲಾಗಿದೆ.

See also  ವಾಟ್ಸಾಪ್‌ ಮಾಹಿತಿ ನಂಬಿ ಮೊಸಗೊಳಗಾದ ಪುತ್ತೂರಿನ ವ್ಯಕ್ತಿ..! ವಂಚಕರು ಖಾತೆಯಿಂದ 22 ಲಕ್ಷ ರೂ. ವರ್ಗಾಯಿಸಿಕೊಂಡದ್ದೇಗೆ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget