ಕರಾವಳಿಸುಳ್ಯ

5 ವರ್ಷ ಬಾಲಕಿಯ ಅಪಹರಿಸಿ ಮೇಲೆರಗಿದ ರಾಕ್ಷಸ,ಕಾಮತೃಷೆ ತೀರಿಸಿಕೊಂಡು ಕೊಂದು ಹೂತು ಹಾಕಿದ ಪಾಪಿ

263

ನ್ಯೂಸ್ ನಾಟೌಟ್ :5 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿ (Sexual Assault) ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೇರಳದ (Kerala) ಎರ್ನಾಕುಲಂ (Ernakulam) ಜಿಲ್ಲೆಯಲ್ಲಿ ನಡೆದಿದೆ. ಮೃತ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಹೂತುಹಾಕಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ. ದುಷ್ಕೃತ್ಯ ನಡೆಸಿದ ಆರೋಪಿಯನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿ ಆತನ ಚಳಿ ಬಿಡಿಸಿದ್ದಾರೆ.

ಕುಡಿದ ಅಮಲಿನಲ್ಲಿದ್ದ ಈತ ಬಾಲಕಿಯನ್ನು ಅಪಹರಿಸಿದ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಸಂಜೆ ಐದು ಗಂಟೆ ವೇಳೆಗೆ ಚಾಕಲೇಟ್ ಆಸೆ ತೋರಿಸಿ ಆಕೆಯನ್ನು ಅಪಹರಿಸಿದ್ದಾನೆಂದು ತಿಳಿದು ಬಂದಿದೆ.

ಈ ವೇಳೆ ಸೆರೆಯಾದ ಆರೋಪಿ ಜತೆಗೆ ವಿಚಾರಿಸಲು ಪ್ರಯತ್ನಿಸಿದ ಪೊಲೀಸರು ಆತನಿಂದ ಮಾಹಿತಿ ಪಡೆಯೋದಕ್ಕೆ ಹಲವು ಸಮಯಗಳೇ ಬೇಕಾದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕಂಠಪೂರ್ತಿ ಕುಡಿದಿದ್ದರಿಂದ ಆತನಿಗೆ ಮಾತನಾಡೋದಕ್ಕೂ ಸಾಧ್ಯವಾಗುತ್ತಿರಲಿಲ್ಲವೆಂದು ಹೇಳಿದ್ದಾರೆ.

ಬಿಹಾರ (Bihar) ಮೂಲದ ದಂಪತಿಯ 5 ವರ್ಷದ ಮಗಳು ನಾಪತ್ತೆಯಾಗುತ್ತಿದ್ದಂತೆ ಎಲ್ಲೆಡೆ ಹುಡುಕಾಟ ನಡೆಸಲು ಶುರು ಮಾಡಿದ್ದಾರೆ. ಕೊನೆಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಅಸ್ಫಾಕ್ ಅಸ್ಲಾಮ್ ಎಂದು ಗುರುತಿಸಿ ಬಂಧಿಸಲಾಗಿದೆ. ಮಾತ್ರವಲ್ಲ ಶನಿವಾರ ಬೆಳಗ್ಗೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.ತಾನು ಕೊಂದು ಹೂತು ಹಾಕಿದ ಜಾಗವನ್ನು ತೋರಿಸಿದ್ದು ಬೆಚ್ಚಿ ಬೀಳಿಸುವ ಘಟನೆಯೇ ಇದಾಗಿದೆ.

ಆರೋಪಿ ಇತ್ತೀಚಿಗೆ ಬಾಲಕಿ ಮತ್ತು ಆಕೆಯ ಕುಟುಂಬ ವಾಸಿಸುತ್ತಿದ್ದ ಕಟ್ಟಡಕ್ಕೆ ತೆರಳಿದ್ದ. ಬಳಿಕ ಆಕೆಯನ್ನು ಅಲ್ಲಿಂದ ಬೇರೆಡೆಗೆ ಕರೆದೊಯ್ದು ಲೈಂಗಿಕ ತೃಷೆ ತೀರಿಸಿಕೊಂಡಿದ್ದಾನೆ. ಆಕೆ ಬಾಯಿ ಬಿಡುತ್ತಾಳೆ ಎನ್ನುವ ಸೂಚನೆ ಸಿಕ್ಕ ಬಳಿಕ ಆಕೆಯ ಕತ್ತು ಹಿಸುಕಿ ಕೊಂದು ಆಕೆಯ ಮೃತದೇಹ ಯಾರಿಗೂ ಕಾಣದ ರೀತಿಯಲ್ಲಿ ಮುಚ್ಚಿ ಹಾಕಿದ್ದಾನೆ. ಕಸಗಳು ಮತ್ತು ಗೋಣಿ ಚೀಲಗಳನ್ನು ಬಳಸಿದ್ದು ಯಾರಿಗೂ ಗೊತ್ತಾಗದ ರೀತಿಯನ್ನು ಶವವನ್ನು ಮುಚ್ಚಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ನಾಪತ್ತೆಯಾದ ಬಳಿಕ ಆಕೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಇದನ್ನು ಗಮನಿಸಿದ ವ್ಯಕ್ತಿಯೋರ್ವರು ಪ್ರತಿಕ್ರಿಯಿಸಿದ್ದಾರೆ. ಈ ಬಾಲಕಿಯನ್ನು ಮಾರುಕಟ್ಟೆ ಪ್ರದೇಶದಲ್ಲಿ ನೋಡಿದ್ದೇನೆ. ಆಕೆ ಆರೋಪಿ ಜೊತೆ ಇರುವುದನ್ನು ಗಮನಿಸಿದ್ದೇನೆ.ಮಾತ್ರವಲ್ಲ, ಮಗುವಿನ ಬಗ್ಗೆ ಆರೋಪಿ ಬಳಿ ವಿಚಾರಿಸಿದಾಗ ಈ ವೇಳೆ ಆರೋಪಿ ಈಕೆ ತನ್ನ ಮಗಳು ಎಂದು ತಿಳಿಸಿದ್ದಾನೆ .ಬಳಿಕ ಮದ್ಯಪಾನ ಮಾಡುವ ಸಲುವಾಗಿ ಮಾರುಕಟ್ಟೆಯ ಹಿಂಬದಿಗೆ ಹೋಗಿದ್ದಾನೆ. ಅಲ್ಲದೇ ಬಾಲಕಿಯ ಕೈಯಲ್ಲಿ ಮಿಠಾಯಿ ಇತ್ತು ಎಂದು ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ಮಾರುಕಟ್ಟೆಯ ಹಿಂಭಾಗದಲ್ಲಿ ಶೋಧಕಾರ್ಯವನ್ನು ನಡೆಸಿದ್ದಾರೆ. ಘಟನೆಯ ಬಳಿಕ ಬಾಲಕಿಯನ್ನು ಪೋಷಕರಿಗೆ ಜೀವಂತವಾಗಿ ಮರಳಿಸಲಾಗದ್ದರಿಂದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಷಕರಲ್ಲಿ ಕ್ಷಮೆಯಾಚಿಸಿದ್ದಾರೆ.

  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget