ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

5 ತಿಂಗಳ ಕಂದನನ್ನು ಕಚ್ಚಿ ಕೊಂದ ಬೀದಿ ನಾಯಿ..! ಮಗುವನ್ನು ಮಲಗಿಸಿ ಕೆಲಸಕ್ಕೆ ಹೋಗಿದ್ದ ಹೆತ್ತವರು..!

ನ್ಯೂಸ್ ನಾಟೌಟ್: ನಾಯಿಯೊಂದು 5 ತಿಂಗಳ ಮಗುವನ್ನು ಕಚ್ಚಿ ಕೊಂದಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರಿನಲ್ಲಿ ಮೇ.14 ರಂದು ನಡೆದಿದೆ. ಬಾಬುಸಾಯಿ ಎಂಬ ಮಗುವನ್ನು ಪೋಷಕರು ಕೆಲಸಕ್ಕೆ ಹೋಗುವ ವೇಳೆ ಮನೆಯಲ್ಲಿ ಮಲಗಿಸಿದ್ದರು. ಯಾರ ಗಮನಕ್ಕೂ ಬಾರದಂತೆ ಒಳ ಪ್ರವೇಶಿಸಿದ ನಾಯಿ ದಾಳಿ ಮಾಡಿ ಕೊಲೆ ಮಾಡಿದೆ.

ಮಗುವಿನ ತಂದೆ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕೆಲಸದ ಸ್ಥಳದಲ್ಲಿದ್ದ ಸಾಕು ನಾಯಿ ಅದು ಎಂದು ಸ್ಥಳೀಯ ನಿವಾಸಿಗಳು ಹೇಳಿದರೆ, ಜಾಗದ ಮಾಲೀಕರು ಬೀದಿ ನಾಯಿ ಎಂದು ಹೇಳಿದ್ದಾರೆ. ಕಳೆದ ತಿಂಗಳು ಬೀದಿ ನಾಯಿಗಳ ದಾಳಿಯಲ್ಲಿ ಕನಿಷ್ಠ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. 2022 ರಿಂದ 2023 ರವರೆಗೆ ನಾಯಿ ಕಡಿತದ ಘಟನೆಗಳು ವರ್ಷದಿಂದ ವರ್ಷಕ್ಕೆ ಶೇಕಡಾ 26.5 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಳೆದ ಡಿಸೆಂಬರ್​ನಲ್ಲಿ ವರದಿ ಮಾಡಿತ್ತು.

Click 👇

https://newsnotout.com/2024/05/costly-mango-miya-jacky
https://newsnotout.com/2024/05/kerala-bomb-issue

Related posts

ಇದು ವಿಶ್ವದ ಅತ್ಯಂತ ದುಬಾರಿ ಹಸು..! ಈ ಹಸು ಖರೀದಿಸುವ ಬೆಲೆಯಲ್ಲಿ ಹೊಸ ಕಾರು, ದೊಡ್ಡ ಬಂಗಲೆಯನ್ನೇ ಖರೀದಿಸಬಹುದು..!

ದೊಣ್ಣೆಯಿಂದ ಹೊಡೆದು ಸ್ವಾಮೀಜಿಯ ಬರ್ಬರ ಹತ್ಯೆ..! ಉಳಿದಿಬ್ಬರು ಸ್ವಾಮೀಜಿಗಳನ್ನು ಬಂಧಿಸಿದ ಪೊಲೀಸರು..!

ಎಟಿಎಂ ಕಳ್ಳತನ ವಿಫಲವಾದದ್ದೇಗೆ..? ಕಳ್ಳತದ ವೇಳೆ 7 ಲಕ್ಷ ರೂ. ಬೆಂಕಿಗಾಹುತಿಯಾದದ್ದೇಗೆ..?