ಶಿಕ್ಷಣ

ಐದನೇ ಮತ್ತು ಎಂಟನೇ ಬೋರ್ಡ್ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ! ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ಈ ಕ್ರಮ

ನ್ಯೂಸ್ ನಾಟೌಟ್: 5 ಮತ್ತು ೮ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಪಠ್ಯ ಕ್ರಮದಲ್ಲಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಒಪ್ಪಿಗೆ ನೀಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾ 27 ರಿಂದ ಏ.೧ರವರೆಗೆ ಪರೀಕ್ಷೆ ನಡೆಯಲಿದೆ ಎಂದು ವರದಿ ತಿಳಿಸಿದೆ.

5 ನೇ ತರಗತಿಯ ಪರೀಕ್ಷೆಯು ಮಾರ್ಚ್ 27 ರಿಂದ ಮಾರ್ಚ್ 30 ರವರೆಗೆ ಮತ್ತು೮ ನೇ ತರಗತಿಗೆ ಮಾರ್ಚ್ 227 ರಿಂದ ಏಪ್ರಿಲ್ 1 ರವರೆಗೆ ನಡೆಯಲಿದೆ. ಪರೀಕ್ಷೆಯು ಆಯಾ ಶಾಲೆಗಳಲ್ಲಿ ನಡೆಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಪ್ರಶ್ನೆ ಪತ್ರಿಕೆಯನ್ನು ವಿನ್ಯಾಸಗೊಳಿಸಿ ಸರಬರಾಜು ಮಾಡುತ್ತದೆ ಮತ್ತು ಶಾಲಾ ಹಂತದಲ್ಲಿ ಪರೀಕ್ಷೆಯನ್ನು ನಡೆಸುತ್ತದೆ.

5 ನೇ ತರಗತಿ ಮತ್ತು 8 ನೇ ತರಗತಿ ವಾರ್ಷಿಕ ಪರೀಕ್ಷೆಗಳು ಮಾರ್ಚ್‌ನಲ್ಲಿ ನಡೆಯಲಿದೆ. 2 ಗಂಟೆಗಳ ಅವಧಿಗೆ 50 ಅಂಕಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ೪೦ ಅಂಕಗಳನ್ನು ಬರೆಯಲಾಗುವುದು ಮತ್ತು 10 ಅಂಕಗಳು ಮೌಖಿಕವಾಗಿರುತ್ತವೆ. ಬೋರ್ಡ್ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಮೌಲ್ಯಾಂಕನದಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆಲ ತಿಂಗಳು ವಿಶೇಷ ತರಗತಿ ನಡೆಸಿ ಅವರ ಕಲಿಕಾ ಮಟ್ಟ ಸುಧಾರಿಸಿ ಮುಂದಿನ ತರಗತಿಗೆ ಪ್ರವೇಶ ಕಲ್ಪಿಸಲಾಗುವುದು ಎಮದು ಶಿಕ್ಷಣ ಇಲಾಖೆ ತಿಳಿಸಿದೆ.

27-03-2023 – ಪ್ರಥಮ ಭಾಷೆ

28-03-2023 – ದ್ವಿತೀಯ ಭಾಷೆ

29-03-2023 – ಪರಿಸರ ಅಧ್ಯಯನ

30-03-2023 – ಗಣಿತ

27-03-2023 – ಪ್ರಥಮ ಭಾಷೆ

28-03-2023 – ದ್ವಿತೀಯ ಭಾಷೆ

29-03-2023 – ತೃತೀಯ ಭಾಷೆ

30-03-2023 – ಗಣಿತ

31-03-2023 – ವಿಜ್ಞಾನ

01-04-2023 – ಸಮಾಜ ವಿಜ್ಞಾನ

Related posts

ಇನ್ನು ಮುಂದೆ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಗಳಿಲ್ಲ..! ಈ ವರ್ಷದ 20% ಗ್ರೇಸ್ ಅಂಕಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಆಕ್ಷೇಪ..! ಶಿಕ್ಷಣ ಸಚಿವ ಹೇಳಿದ್ದೇನು..?

14 ವರ್ಷದ ಬಾಲಕಿಯಿಂದ ಸುಳ್ಳು ಲೈಂಗಿಕ ಕಿರುಕುಳದ ಕಥೆ! ಮನಃಶಾಸ್ತ್ರಜ್ಞರಿಂದ ಬಯಲಾಯ್ತು ರಹಸ್ಯ!

ನರ್ಸರಿಯಿಂದ 8ನೇ ತರಗತಿವರೆಗಿನ ಶಾಲೆಗಳಿಗೆ 5 ದಿನ ರಜೆ – ಶಿಕ್ಷಣಾಧಿಕಾರಿ ಆದೇಶ! ಯಾವ ಯಾವ ಜಿಲ್ಲೆಗಳಲ್ಲಿ ರಜೆ..? ಇಲ್ಲಿದೆ ಸಂಪೂರ್ಣ ಮಾಹಿತಿ