Uncategorized

23 ವರ್ಷದ ಖ್ಯಾತ ನಟಿ ತಾಯಿಗೆ ಹೆಣ್ಣು ಮಗು ಜನನ,47ನೇ ವಯಸ್ಸಿಗೆ ಅಮ್ಮನ ಹೊಟ್ಟೆಯಿಂದ ತಂಗಿ ಬಂದಳು- ಅಕ್ಕನ ಪೋಸ್ಟ್ ವೈರಲ್

ನ್ಯೂಸ್ ನಾಟೌಟ್ : ಸಾಮಾನ್ಯವಾಗಿ 45 ವಯಸ್ಸಿನ ನಂತರ ಮಹಿಳೆಯರಿಗೆ ಮುಟ್ಟಾಗುವ ಕ್ರಿಯೆ ನಿಲ್ಲುತ್ತದೆ. ಆದರೆ ಕೇರಳದ ಈ ತಾಯಿಯೊಬ್ಬರು ತಮ್ಮ 47ನೇ ವಯಸ್ಸಿನಲ್ಲಿ ಪುಟ್ಟ ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಹಿರಿ ಮಗಳಿಗೆ ಈಗಾಗಲೇ ೨೩ ವರ್ಷ ವಯಸ್ಸಾಗಿದ್ದು ಮದುವೆಯ ವಯಸ್ಸು. ಆದರೆ ತನಗೆ ತಂಗಿ ಬರ್ತಿದ್ದಾಳೆ ಅಂತಾ ಸಂಭ್ರಮಿಸಿದ್ದು,ಇವರು ಭಾವನಾತ್ಮಕವಾಗಿ ಬರೆದಿರುವ ಪೋಸ್ಟ್ ವೈರಲ್ ಆಗಿದೆ.

ಮಗಳು ಆರ್ಯ ಪಾರ್ವತಿ ಮೋಹಿನಿಯಾಟ್ಟಂ ಕಲಾವಿದೆ, ಗಾಯಕಿ, ನಟಿಯೂ ಕೂಡ.ಕೇರಳ ಮೂಲದ ಯುವತಿ ಇನ್ಸ್‌ಟಾಗ್ರಾಂನಲ್ಲಿ ಅಮ್ಮ ಪ್ರೆಗ್ನೆಂಟ್‌ ಅನ್ನೋ ವಿಷಯವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದರು.

ಆರ್ಯ ಪಾರ್ವತಿ ಬರೆದ ಪೋಸ್ಟ್‌ನಲ್ಲಿ ‘ಒಂದು ಪೋನ್‌ ಕರೆ ನನ್ನ ಜೀವನವನ್ನೇ ಬದಲಿಸಿತು. ಕಳೆದ ವರ್ಷ ನಾನು ರಜೆ ಪಡೆದು ಹಾಸ್ಟೆಲ್‌ನಿಂದ ಮನೆಗೆ ವಾಪಸ್‌ ಆಗೋ 4 ದಿನದ ಮೊದಲು ಅಪ್ಪ ನನಗೆ ಫೋನ್‌ ಮಾಡಿದ್ರು. ಆರಂಭದಲ್ಲಿ ಹೇಗೆ ಹೇಳೋದು ಅಂತಾ ತೋಚದೆ ಅಪ್ಪ ತೊದಲಿದರು. ನಂತರ ‘ನೀನು ಅಕ್ಕನಾಗುತ್ತಿದ್ದೀಯಾ’ ಅಂದ್ರು. ಆ ಕ್ಷಣ ನನಗೆ ಶಾಕ್ ಅನ್ನಿಸಿತು’ ಎಂದು ಹೇಳಿದ್ದಾರೆ.‘ನಾನು ಬಾಲ್ಯದಲ್ಲಿರೋವಾಗ ಅಮ್ಮನಿಗೆ ಯಾವಾಗಲೂ ನನಗೊಬ್ಬ ಒಡಹುಟ್ಟಿದವ ಬೇಕು ಅಂತಾ ಹೇಳುತ್ತಿದ್ದೆ. ಆದರೆ ಅಮ್ಮನಿಗೆ ಗರ್ಭಾಶಯದಲ್ಲಿ ಸಮಸ್ಯೆ ಇದ್ದ ಕಾರಣ ಮತ್ತೆ ಗರ್ಭಿಣಿ ಆಗಲು ಸಾಧ್ಯವಾಗಲಿಲ್ಲ ಹೀಗಾಗಿ ಅಮ್ಮ ಕೂಡ ಮತ್ತೆ ತಾಯಿಯಾಗುವ ಆಸೆಯನ್ನು ಬಿಟ್ಟಿದ್ದರು’ ಎಂದು ಆರ್ಯ ಪಾರ್ವತಿ ಬರೆದುಕೊಂಡಿದ್ದಾರೆ.

‘ನಂತರ ನಾನು ಅಮ್ಮನ ಜೊತೆ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸಿದೆ. ಆಗ ಅಮ್ಮ ನನ್ನಲ್ಲಿ ಈ ವಿಷಯ ಹೇಳಿದ್ರು. ಒಂದಿನ ಅಪ್ಪ ಮತ್ತು ಅಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಆಗ ಅಮ್ಮ ಇದ್ದಕ್ಕಿದ್ದಂತೆ ತಲೆತಿರುಗಿ ಬಿದ್ದರು. ವೈದ್ಯರಲ್ಲಿಗೆ ಹೋದಾಗ ಅವರು ಪ್ರೆಗ್ನೆಂಟ್ ಎಂದು ಹೇಳಿದ್ರು. ಕೆಲ ಕಾರಣಗಳಿಗಾಗಿ ಅಮ್ಮನ ಹೊಟ್ಟೆ ಉಬ್ಬಿರಲಿಲ್ಲ. ಹೀಗಾಗಿ ಅಮ್ಮ ವಯಸ್ಸಿನ ಕಾರಣಕ್ಕೆ ಮುಟ್ಟು ನಿಂತಿದೆ ಅಂದುಕೊಂಡಿದ್ದರು. ವೈದ್ಯರು ಕೂಡ ಕೆಲ ವರ್ಷಗಳ ಹಿಂದೆಯೇ ಅಮ್ಮ ಮತ್ತೆ ಗರ್ಭಿಣಿ ಆಗಲು ಸಾಧ್ಯವಿಲ್ಲ ಅಂದಿದ್ದು ಅಮ್ಮನ ತಲೆಯಲ್ಲಿ ಗಟ್ಟಿಯಾಗಿ ಕೂತಿತ್ತು ಎಂದು ಆರ್ಯ ಪಾರ್ವತಿ ಬರೆದುಕೊಂಡಿದ್ದಾರೆ.

ಅಮ್ಮ ಗರ್ಭಿಣಿಯಾಗಿರೋದನ್ನು ನಿಧಾನವಾಗಿ ನಮ್ಮ ಸಂಬಂಧಿಕರಿಗೆ ಹೇಳಲು ಪ್ರಾರಭಿಸಿದೆವು. ಆಗ ಕೆಲವರು ಕಾಳಜಿ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಗೇಲಿ ಮಾಡಿದರು ಎಂದಿರುವ ಆರ್ಯಪಾರ್ವತಿ, ಇದ್ಯಾವದಕ್ಕೂ ನಾವು ತಲೆಕೆಡಿಸಿಕೊಳ್ಳಲಿಲ್ಲ, ಬದಲಾಗಿ ಅಮ್ಮನ ಆರೋಗ್ಯದ ಕಡೆಗೆ ಗಮನ ವಹಿಸಲು ಶುರು ಮಾಡಿದ್ದೆವು. ಹೀಗಾಗಿ ಕಳೆದ ವಾರ ಅಮ್ಮ ಯಾವುದೇ ಸಮಸ್ಯೆ ಇಲ್ಲದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ನಾನು ಅಕ್ಕನಾಗಿದ್ದೇನೆ. ಅವಳು ನನ್ನನ್ನು ಅಕ್ಕ ಎಂದು ಕರೆಯುವವರೆಗೆ ಕಾಯಲು ನನ್ನಿಂದ ಸಾಧ್ಯವಿಲ್ಲ. ಜನ ಮಾತಾಡಿಕೊಳ್ತಾರೆ, ಅದು ನನಗೆ ಮುಖ್ಯವಲ್ಲ. ಈಗ ನನ್ನ ತಂಗಿ ಬಂದ ನಂತರ ನಮ್ಮ ಕುಟುಂಬದಲ್ಲಿ ಸಂತಸ ಇಮ್ಮಡಿಯಾಗಿದೆ ಎಂದು ಆರ್ಯ ಪಾರ್ವತಿ ಖುಷಿಯಿಂದ ಹೇಳಿಕೊಂಡಿದ್ದಾರೆ.

ಮೋಹಿನಿಯಾಟ್ಟಂ ಕಲಾವಿದೆಯಾಗಿ, ನೃತ್ಯಗಾರ್ತಿಯಾಗಿ, ಗಾಯಕಿಯಾಗಿ ಮತ್ತು ನಟಿಯಾಗಿ ಖ್ಯಾತಿ ಪಡೆದಿರುವ ಆರ್ಯ ಪಾರ್ವತಿ ಅವರು ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಶಿಕ್ಷಣದ ಕಾರಣಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸದ್ಯ ಅಮ್ಮನ ಜೊತೆ ಕಾಲ ಕಳೆಯುತ್ತಾ ತನ್ನ ಮುದ್ದು ತಂಗಿಯನ್ನು ಕಾಳಜಿ ಮಾಡುತ್ತಿದ್ದಾರೆ.

Related posts

ಅಂಗನವಾಡಿ ಕಾರ್ಯಕರ್ತೆಗೆ ಶಿಕ್ಷಕಿ ಸ್ಥಾನ, ಪ್ರಸ್ತಾವನೆ ಸಲ್ಲಿಕೆ

ಭೀಕರ ಬೈಕ್ ಅಪಘಾತ, ಯುವಕನ ದಾರುಣ ಸಾವು

ಗೋಕಾಕ್‌ನಲ್ಲೂ ಸಾಮೂಹಿಕ ಅತ್ಯಾಚಾರ: ಅಪ್ರಾಪ್ತೆ ಕುಟುಂಬಕ್ಕೆ ಬೆದರಿಕೆ