Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

400 ಪ್ರಯಾಣಿಕರಿದ್ದ ಪಾಕ್‌ ರೈಲನ್ನು ಹೈಜಾಕ್ ಮಾಡಿದ ಉಗ್ರರು..! 6 ಮಂದಿ ಸೈನಿಕರ ಹತ್ಯೆ..!

371
Spread the love

ನ್ಯೂಸ್ ನಾಟೌಟ್: 400 ಪ್ರಯಾಣಿಕರಿದ್ದ ಪಾಕಿಸ್ತಾನದ ಜಾಫರ್ ಎಕ್ಸ್‌ ಪ್ರೆಸ್ ರೈಲನ್ನು ಬಲೂಚಿಸ್ತಾನ್‌ ಪ್ರಾಂತ್ಯದ ಪ್ರತ್ಯೇಕತಾ ವಾದಿ ಉಗ್ರರ ಗುಂಪು ಬೋಲಾನ್‌ ಪ್ರದೇಶದಲ್ಲಿ ಇಂದು (ಮಾ.11) ಹೈಜಾಕ್‌ ಮಾಡಿದೆ ಎಂದು ವರದಿಯಾಗಿದೆ.

ಬಲೂಚ್ ಲಿಬರೇಶನ್ ಆರ್ಮಿ ಭಯೋತ್ಪಾದಕ ಗುಂಪು ದಾಳಿ ಹೊಣೆ ಹೊತ್ತುಕೊಂಡಿದೆ. ಘಟನೆಯಲ್ಲಿ 6 ಮಂದಿ ಸೈನಿಕರು ಹತ್ಯೆಗೀಡಾಗಿದ್ದು, ರೈಲು ಚಾಲಕ ಗಾಯಗೊಂಡಿದ್ದಾರೆ. ಸುಮಾರು 120 ಮಂದಿಯನ್ನು ಉಗ್ರರ ಗುಂಪು ಒತ್ತೆಯಾಳಾಗಿರಿಸಿಕೊಂಡಿದೆ.

ಮೊದಲಿಗೆ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಬೋಲಾನ್‌ನ ಧದರ್‌ ನ ಮಶ್ಕಾಫ್‌ ಪ್ರದೇಶದಲ್ಲಿ ಪೇಶಾವರ ಮಾರ್ಗದ ರೈಲ್ವೆ ಹಳಿಯನ್ನು ಉಗ್ರರು ಸ್ಫೋಟಿಸಿದ್ದಾರೆ. ಇದರಿಂದ ಜಾಫರ್ ಎಕ್ಸ್‌ಪ್ರೆಸ್ ಅಳಿ ತಪ್ಪಿದ್ದು, ದಾಳಿ ನಡೆಸಿದ ಉಗ್ರರು ರೈಲನ್ನು ಹೈಜಾಕ್‌ ಮಾಡಿದ್ದಾರೆ ಎಂದು ಉಗ್ರರ ಗುಂಪು ಹೇಳಿಕೊಂಡಿದೆ.

ಸದ್ಯ ಉಗ್ರರು ಸೆರೆ ಹಿಡಿದಿರುವ ಒತ್ತೆಯಾಳುಗಳಲ್ಲಿ ಪಾಕಿಸ್ತಾನಿ ಮಿಲಿಟರಿ, ಪೊಲೀಸ್‌, ಭಯೋತ್ಪಾದಕ ನಿಗ್ರಹ ದಳ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಕರ್ತವ್ಯ ನಿರತ ಸಿಬ್ಬಂದಿಯೂ ಸೇರಿದ್ದಾರೆ ಎನ್ನಲಾಗಿದೆ. ಆದ್ರೆ ಸೆರೆ ಸಿಕ್ಕ ಮಹಿಳೆಯರು ಮಕ್ಕಳು ಮತ್ತು ಬಲೂಚಿಸ್ತಾನದ ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದೇವೆ ಎಂದು ಉಗ್ರರ ಗುಂಪು ಹೇಳಿದೆ.
ಸದ್ಯ ಸ್ಥಳೀಯ ಸರ್ಕಾರವು ತುರ್ತು ಕ್ರಮಕ್ಕೆ ಮುಂದಾಗಿದ್ದು, ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ಪ್ರಯತ್ನದಲ್ಲಿ ತೊಡಗಿದೆ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಿವೆ ಎಂದು ಸರ್ಕಾರಿ ವಕ್ತಾರ ಶಾಹಿದ್ ರಿಂಡ್ ಹೇಳಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

ನಾವು ರೈಲನ್ನು 100ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದೇವೆ. ನಮ್ಮ ವಿರುದ್ಧ ಸೇನೆ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಸಿದ್ರೂ ಅದರ ಪರಿಣಾಮ ತೀವ್ರವಾಗಿರುತ್ತದೆ. 100ಕ್ಕೂ ಹೆಚ್ಚು ಒತ್ತೆಯಾಳುಗಳನ್ನ ಗಲ್ಲಿಗೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

See also  ಸುಳ್ಯ: ಪಾಲಡ್ಕದಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಹಿಂದಿನಿಂದ ಗುದ್ದಿದ ಕಾರು..! ಪ್ರಯಾಣಿಕರು ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget