ವೈರಲ್ ನ್ಯೂಸ್

40 ರೂ. ಸಾಲ ಮಾಡಿ ಲಾಟರಿ ಖರೀದಿಸಿದ್ದ ಆತ ಲಕ್ಷಾಧಿಪತಿಯಾದ್ದು ಹೇಗೆ? ಕುರಿಗಾಹಿಗೆ ಒಲಿದ ಅದೃಷ್ಟ ಲಕ್ಷ್ಮೀಯ ಕಥೆ!

243

ನ್ಯೂಸ್ ನಾಟೌಟ್: ಅದೃಷ್ಟದ ಆಟ ಹೇಗಿರುತ್ತೇ ಎಂದು ಹೇಳೋದಕ್ಕೆ ಸಾಧ್ಯವೇ ಇಲ್ಲ. ಅದೃಷ್ಟ ಒಳ್ಳೆಯದಿದ್ದರೆ ಯಾರ ಜೀವನ ಯಾವಾಗಬೇಕಾದರು ಬದಲಾದೀತು ಅಂತಹ ಒಂದು ಸ್ಟೋರಿ ಇಲ್ಲಿದೆ. ಒಬ್ಬ ಕಾರ್ಮಿಕ ಲಾಟರಿ ಗೆದ್ದು ರಾತ್ರೋ ರಾತ್ರಿ ಲಕ್ಷಾಧಿಪತಿಯಾದ ಕಥೆ ಇದು.

ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯ ಕೂಲಿ ಕಾರ್ಮಿಕರೊಬ್ಬರು ಮೇಕೆ ಮೇಯಿಸಲು ಹೋಗಿದ್ದರು. ಆದರೆ ಮೇಕೆ ಮೇಯಿಸಿ ಹಿಂತಿರುಗುದಾಗ ಲಕ್ಷಾಧಿಪತಿಯಾಗಿದ್ದಾರೆ. ಇದು ಆಶ್ವರ್ಯಕರವಾದರೂ ನಿಜ.

ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ಪೂರ್ವ ಬರ್ದಮನ್‌’ನಲ್ಲಿ. ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯಲ್ಲಿ ವಾಸಿಸುವ ಕೂಲಿ ಕಾರ್ಮಿಕ ಭಾಸ್ಕರ್ ಮಜಿಗೆ ಅದೃಷ್ಟ ಒಲಿದಿದ್ದು, ಮೇಕೆ ಮೇಯಿಸಲು ಹೋಗಿದ್ದ ಈ ಕಾರ್ಮಿಕ, ಕೆಲಸ ಮುಗಿಸಿ ಹಿಂತಿರುಗುವಷ್ಟರಲ್ಲಿ ಲಾಟರಿ ಹೊಡೆದು ಲಕ್ಷಾಧಿಪತಿಯಾಗಿದ್ದಾನೆ.

ಆ ರೈತ ಕಳೆದ ಹತ್ತು ವರ್ಷಗಳಿಂದ ಲಾಟರಿ ಟಿಕೆಟ್‌’ಗಳನ್ನು ಖರೀದಿಸುತ್ತಿದ್ದನಂತೆ. ಅದೇ ರೀತಿ ಭಾನುವಾರದಂದು 40 ರೂಪಾಯಿ ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ್ದು, ಮಧ್ಯಾಹ್ನದ ವೇಳೆಗೆ ಲಕ್ಷಾಧಿಪತಿಯಾಗಿದ್ದಾನೆ.

See also  ಪತ್ನಿಯ ಪರ ಪ್ರಚಾರಕ್ಕಿಳಿದ ನಟ ಶಿವರಾಜ್ ಕುಮಾರ್, ನಟನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget