ವೈರಲ್ ನ್ಯೂಸ್ಸಿನಿಮಾ

40 ಕೋಟಿ ರೂ. ಬಜೆಟ್ ನ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 25 ಲಕ್ಷ ರೂಪಾಯಿ..! ಬಚ್ಚನ್ ವೃತ್ತಿ ಜೀವನದಲ್ಲಿ ಅತಿ ಕಡಿಮೆ ಗಳಿಕೆ ಮಾಡಿದ ಸಿನಿಮಾ

ನ್ಯೂಸ್ ನಾಟೌಟ್: ಅಭಿಷೇಕ್ ಬಚ್ಚನ್ ಇತ್ತೀಚೆಗೆ ದೊಡ್ಡ ಹಿಟ್ ನೀಡಿಲ್ಲ. ಅವರ ಮುಖ್ಯಭೂಮಿಕೆ ನಿರ್ವಹಿಸಿದ್ದ ‘ಐ ವಾಂಟ್ ಟು ಟಾಕ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾ ಅಭಿಷೇಕ್ ಬಚ್ಚನ್ ವೃತ್ತಿ ಜೀವನದಲ್ಲಿ ಪ್ರಯೋಗಾತ್ಮಕ ಸಿನಿಮಾ ಆಗಿತ್ತು. ಈ ಸಿನಿಮಾ ರಿಲೀಸ್ ಆಗಿ ನಾಲ್ಕು ದಿನ ಕಳೆದರೂ ಗಳಿಕೆ ಒಂದೂವರೆ ಕೋಟಿ ರೂಪಾಯಿ ದಾಟಿಲ್ಲ ಎನ್ನಲಾಗಿದೆ. ಇದು ಅಭಿಷೇಕ್ ಬಚ್ಚನ್ ಅವರ ವೃತ್ತಿ ಜೀವನದ ಕೊನೆಯ ದಿನಗಳು ಸಮೀಪಿಸಿತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

‘ಐ ವಾಂಟ್ ಟು ಟಾಕ್’ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರ ನೀಡಿಲ್ಲ. ಕೇವಲ ಭಾವಾನಾತ್ಮಕ ಹಾಗೂ ಕೌಟುಂಬಿಕ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಕಾರಣಕ್ಕೆ ಚಿತ್ರ ಜನರಿಗೆ ಹೆಚ್ಚು ಇಷ್ಟ ಆಗಿಲ್ಲ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಸಿನಿಮಾ ನೋಡಿದವರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದರೂ ಜನರು ಸಿನಿಮಾನ ಮೆಚ್ಚಿಕೊಳ್ಳುತ್ತಿಲ್ಲ. ಇದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ನಿರ್ಮಾಪಕರಿಗೆ ಹೊರ ಆಗಿದೆ ಎನ್ನಲಾಗಿದೆ.

‘ಐ ವಾಂಟ್ ಟು ಟಾಕ್’ ಸಿನಿಮಾ ಮೊದಲ ದಿನ (ನವೆಂಬರ್ 22) 25 ಲಕ್ಷ ರೂಪಾಯಿ, ಎರಡನೇ ದಿನ 55 ಲಕ್ಷ ರೂಪಾಯಿ, ಮೂರನೇ ದಿನ 53 ಲಕ್ಷ ರೂಪಾಯಿ ಗಳಿಸಿದೆ. ನಾಲ್ಕನೇ ದಿನ ಅಂದರೆ ಸೋಮವಾರ (ನವೆಂಬರ್ 26) ಈ ಚಿತ್ರ ಕೇವಲ 19 ಲಕ್ಷ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 1.46 ಕೋಟಿ ರೂಪಾಯಿ ಗಳಿಕೆ ಮಾಡಿದೆ.

‘ಐ ವಾಂಟ್ ಟು ಟಾಕ್’ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಜೊತೆ ಅಹಿಲ್ಯಾ ಬಮ್ರೂ ಕೂಡ ನಟಿಸಿದ್ದಾರೆ. ಅಭಿಷೇಕ್ ಬಚ್ಚನ್ ವೃತ್ತಿ ಜೀವನದಲ್ಲಿ ಅತಿ ಕಡಿಮೆ ಗಳಿಕೆ ಮಾಡಿದ ಸಿನಿಮಾ ಇದಾಗಿದೆ. ‘ಐ ವಾಂಟ್ ಟು ಟಾಕ್’ ಸಿನಿಮಾದ ಬಜೆಟ್ 40 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ.

Click

https://newsnotout.com/2024/11/darshan-kananda-news-bail-viral-news-viral-news-fh/
https://newsnotout.com/2024/11/kannada-news-hasana-alur-2-years-love-jf/
https://newsnotout.com/2024/11/rbi-governer-illness-kannada-news-chennail-apolo/
https://newsnotout.com/2024/11/puri-kannada-news-viral-news-school-jhf/

Related posts

ಆನ್ ಲೈನ್ ನಲ್ಲೇ ಮದುವೆ ಆದ ಬಿಜೆಪಿ ಮುಖಂಡನ ಮಗ..!, ಫಸ್ಟ್ ನೈಟ್ ಹೇಗೆ ಅಂತ ಕೆಣಕಿದ ನೆಟ್ಟಿಗರು..?

ಯುವಕರನ್ನು ವಿವಸ್ತ್ರಗೊಳಿಸಿ ಮೂತ್ರ ವಿಸರ್ಜಿಸಿದ್ಯಾರು? ಆ ರಾತ್ರಿ ನದಿ ದಂಡೆಯಲ್ಲಿ ನಡೆಯಿತು ಅಮಾನವೀಯ ಕೃತ್ಯ! ಯುವಕರು ಬಿಚ್ಚಿಟ್ಟ ಮಾಹಿತಿಗೆ ಪೊಲೀಸರೆ ಶಾಕ್!

ನಿವೇಶನಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದ 9ನೇ ತರಗತಿ ವಿದ್ಯಾರ್ಥಿನಿ..! ಪತ್ರದ ವಿಷಯ ತಿಳಿದು ಓಡೋಡಿ ಬಂದ ತಹಶೀಲ್ದಾರ್ ಹೇಳಿದ್ದೇನು?