ನ್ಯೂಸ್ ನಾಟೌಟ್: ಚಿಕ್ಕಮಗಳೂರು ನಗರದ ದೋಣಿಕಣ ನಿವಾಸಿಯಾದ 45 ವರ್ಷದ ವಿನುತಾರಾಣಿಯನ್ನ 22 ವರ್ಷದ ಹಿಂದೆ ಡಾ.ರವಿಕುಮಾರ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಎಂ.ಬಿ.ಬಿ.ಎಸ್. ಓದುತ್ತಿರೋ ಮಗನೂ ಇದ್ದಾನೆ. ಆದ್ರೆ, ನಾಲ್ಕು ವರ್ಷದಿಂದ ಪತ್ನಿಗೆ ಮಾನಸಿಕ ಕಿರುಕುಳ ನೀಡ್ತಿರೋ ಪತಿಯಿಂದ ಈಕೆಗೆ ಗೃಹಬಂಧನಲ್ಲಿಟ್ಟಿದ್ದಾರೆ.
ಮನೆಯ ಮೇಲಿನ ಮಹಡಿಯ ರೂಮಿನಲ್ಲೇ ಇರಬೇಕು. ಕೇಳಬರುವಂತಿಲ್ಲ. ಬಂದರೂ ಮನೆ ಕೆಲಸ ಮಾಡಿ ಮತ್ತೆ ಮೇಲೆ ಹೋಗಬೇಕು.
ಕೂರೋಕೆ ಒಂದು ಚೇರ್ ಕೊಟ್ಟಿದ್ದಾರೆ ಅಷ್ಟೆ. ಊಟ ಅವರು ಹಾಕಿದಾಗ. ಹಾಕಿದಷ್ಟು ಅಷ್ಟೆ. ಗಂಡ ಹಾಗೂ ಅತ್ತೆ ಊರಿಗೆ ಹೋದರೆ ಈಕೆಗೆ ಅವರು ಬರುವಷ್ಟು ದಿನ ಗೃಹ ದಿಗ್ಭಂದನ. ಮನೆಯಿಂದ ಆಚೆ ಬರುವಂತಿಲ್ಲ. ಅವರು ಹೋಗುವಾಗ 20 ರೂಪಾಯಿ ಕೊಟ್ಟು ಹೋಗ್ತಾರೆ. ಅವರು ಬರುವಷ್ಟು ದಿನ ಮನೆಯಿಂದ ಹೊರಗೋಗದಂತೆ ಅದೇ 20 ರೂಪಾಯಿಯಲ್ಲಿ ಬದುಕಬೇಕು. 4 ವರ್ಷದಿಂದ ಅನ್ನ-ಆಹಾರ ನೀಡದೆ ಗೃಹ ಬಂಧನದಲ್ಲಿಟ್ಟಿದ್ದಾನೆ ಎಂದು ವೈದ್ಯನ ವಿರುದ್ಧ ಗೃಹಿಣಿ ಹಾಗೂ ಆಕೆಯ ಸಹೋದರ ಆರೋಪಿಸಿದ್ದಾರೆ.
ಮನೆಯಲ್ಲೇ ದಿಗ್ಭಂದನ ಹಾಕಿರೋ ಡಾಕ್ಟರ್ ಈಕೆಗೆ ಮೊಬೈಲ್ ಕೊಟ್ಟಿದ್ದಾರೆ. ಯೂಟ್ಯೂಬ್ ನೋಡೋದು ಬಿಟ್ಟು ಬೇರೇನೂ ಮಾಡಲು ಆಗದಂತೆ ಮಾಡಿ ಮೊಬೈಲ್ ನೀಡಲಾಗಿದೆ. ದಿನಕ್ಕೆ ಒಂದು ಅಥವ ಎರಡು ಹೊತ್ತು ಊಟ ಕೊಡ್ತಾರೆ. ಜಾಸ್ತಿ ಕೇಳಿದರೆ ಹೊಡೆಯೋದು, ತಲೆಯನ್ನ ಗೋಡೆಗೆ ಗುದ್ದೋದು, ಎದೆಗೆ ಕಾಲಲ್ಲಿ ಓದೆಯೋದು ಮಾಡ್ತಾರಂತೆ. ಕುತ್ತಿಗೆ ಹಿಸುಕಿ ಸಾಯಿ-ಸಾಯಿ ಎಂದು ಡಾಕ್ಟ್ರು ಹಾಗೂ ಆತನ ಅಮ್ಮ ಹೊಡೆಯುತ್ತಾರೆ ಎಂದು ಆರೋಪಿಸಿದ್ದಾರೆ. ಊಟದಲ್ಲಿ ಸ್ಲೋ ಪಾಯಿಜನ್ ಹಾಕಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ ಎಂದು ವಿನೂತರಾಣಿ ಸಹೋದರ ವಾಗೀಶ್ ಆರೋಪಿಸಿದ್ದಾರೆ.
ಎಂ.ಬಿ.ಬಿ.ಎಸ್. ಓದುತ್ತಿರೋ ಮಗನಿದ್ದು ಆತನಿಗೂ ತಾಯಿಯ ಬಳಿ ಬಿಡೋದಿಲ್ಲ. ಆತ ಕೂಡ ಅಮ್ಮನಿಗೆ ನೀನು ಇನ್ನೂ ಸತ್ತಿಲ್ವಾ, ಯಾವಾಗ ಸಾಯ್ತೀಯಾ. ಅಪ್ಪ ನನಗೆ ಓದಿಸುತ್ತೆ ಅಪ್ಪ ಹೇಳಿದ ಹಾಗೆ ಮಾಡು. ಅಪ್ಪ ಕೊಡೋ ಊಟ ತಿನ್ನು ಅಂತಾನಂತೆ. ನಾಲ್ಕು ವರ್ಷದಿಂದ ಅನ್ನ-ಆಹಾರವಿಲ್ಲದೆ ಗೃಹಬಂಧನದಲ್ಲಿ ನರಳಾಡಿದ ಗೃಹಿಣಿ ಪಕ್ಕದ ಮನೆಯವರಿಂದ ಫೋಟೋ ತೆಗೆಸಿ ತಮ್ಮನಿಗೆ ಕಳಿಸಿ ಇದೀಗ ಆಸ್ಪತ್ರೆ ಸೇರಿದ್ದಾರೆ. ಆಕೆಯ ತಮ್ಮ ವಾಗೀಶ್ ಪೊಲೀಸರನ್ನ ಕರೆದುಕೊಂಡು ಹೋಗಿ ಅಕ್ಕನನ್ನ ಆಸ್ಪತ್ರೆ ಸೇರಿಸಿ ಅಕ್ಕನ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ವಿಚಾರಣೆಯ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಬೇಕಿದೆ.
Click