ಮಡಿಕೇರಿ: ಮನೆಯ ಮಹಡಿ ಮೇಲಿನಿಂದ ಬಿದ್ದು ಮಗುವೊಂದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.
ಪಟ್ಟಣದ ಗೌರಿ ಕೆರೆ ಬಡಾವಣೆ ನಿವಾಸಿ ಮುನೀರ್ ಎಂಬುವವರ ಪುತ್ರ ತಫೀನ್ (4) ಮೃತ ದುರ್ದೈವಿ. ಇಂದು ಮಧ್ಯಾಹ್ನ ಮಹಡಿಯಿಂದ ಆಯತಪ್ಪಿ ಬಿದ್ದ ಮಗುವನ್ನು ರಕ್ಷಿಸಲು ಮುನೀರ್ ಪ್ರಯತ್ನ ಪಟ್ಟರಾದರೂ ಪ್ರಯೋಜನವಾಗಲಿಲ್ಲ. ತಫೀನ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿರುವ ಮುನೀರ್ ಅವರಿಗೆ ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.