ಕ್ರೈಂದೇಶ-ವಿದೇಶವೈರಲ್ ನ್ಯೂಸ್

4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಜಿಲ್ಲಾಧಿಕಾರಿ ನಿವಾಸದ ಬಳಿ ಇದ್ದ ಕ್ಲಬ್ ನಲ್ಲಿ ಪತ್ತೆ..! ಜಿಮ್ ಟ್ರೈನರ್ ಅರೆಸ್ಟ್..!

ನ್ಯೂಸ್ ನಾಟೌಟ್: 4 ತಿಂಗಳ ಹಿಂದೆ ನಾಪತ್ತೆಯಾಗಿದ್ದ 32 ವರ್ಷದ ಮಹಿಳೆಯೊಬ್ಬರ ಮೃತದೇಹವನ್ನು ಉತ್ತರ ಪ್ರದೇಶದ ಕಾನ್ಪುರದ ಕ್ಲಬ್ ವೊಂದರಲ್ಲಿ ಪತ್ತೆ ಹಚ್ಚಲಾಗಿದೆ.

ಆಕೆಯನ್ನು ಆಕೆಯ ಜಿಮ್ ತರಬೇತುದಾರ ಹತ್ಯೆಗೈದಿದ್ದಾನೆ ಎಂದು ಆಕೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಮಹಿಳೆ ಏಕ್ತಾ ಗುಪ್ತಾರ ಜಿಮ್ ತರಬೇತುದಾರ ವಿಶಾಲ್ ಸೋನಿ ನೀಡಿದ ಮಾಹಿತಿಯ ಮೇರೆಗೆ ಆಕೆಯ ಮೃತದೇಹವನ್ನು ಕಾನ್ಪುರ ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ಕ್ಲಬ್ ಒಂದರಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇದಕ್ಕೂ ಮುನ್ನ, ಮೃತ ಮಹಿಳೆಯ ಪತಿ ರಾಹುಲ್ ಗುಪ್ತ ದಾಖಲಿಸಿದ್ದ ದೂರನ್ನು ಆಧರಿಸಿ, ಈ ಪ್ರಕರಣದ ಸಂಬಂಧ ಜಿಮ್ ತರಬೇತುದಾರ ವಿಶಾಲ್ ಸೋನಿಯನ್ನು ಪೊಲೀಸರು ಬಂಧಿಸಿದ್ದರು.
“ವಿಚಾರಣೆಯ ಸಂದರ್ಭದಲ್ಲಿ, ನನಗೂ ಏಕ್ತಾ ಗುಪ್ತಗೂ ಸಂಬಂಧವಿತ್ತು, ನಾನು ಮತ್ತೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಆಕೆ ಆಕ್ಷೇಪಿಸಿದ್ದರು” ಎಂದು ಜಿಮ್ ತರಬೇತುದಾರ ಹೇಳಿಕೆ ನೀಡಿದ್ದಾನೆ.

ಜೂನ್ 24ರಂದು ಜಿಮ್ ಗೆ ತೆರಳಿದ್ದ ಮಹಿಳೆ, ವಿಶಾಲ್ ಸೋನಿಯ ನಿಶ್ಚಿತಾರ್ಥದ ಕುರಿತು ವಾಗ್ವಾದ ನಡೆಸಿದ್ದರು. ಆಗ ವಿಶಾಲ್ ಸೋನಿ ಆಕೆಗೆ ಗುದ್ದಿದ್ದರಿಂದ, ಆಕೆ ಮೂರ್ಛೆ ಹೋಗಿದ್ದರು. ನಂತರ ಆಕೆಯನ್ನು ಹತ್ಯೆಗೈದು ಕಾನ್ಪುರ ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ಕ್ಲಬ್ ಒಂದರಲ್ಲಿ ಹೂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Click

https://newsnotout.com/2024/10/railway-kannada-news-viral-news-bandra-railway-station-mumbai/
https://newsnotout.com/2024/10/belekeri-mining-issue-7-year-jail-mla-sathish-sail-kannada-news-s/
https://newsnotout.com/2024/10/selfy-kannada-news-elephant-kannada-news-elephant/
https://newsnotout.com/2024/10/udupi-railway-box-sakaleshpura-man-nomnore-kannada-news/

Related posts

ಎರಡು ವರ್ಷದ ಮಗು ಮತ್ತು ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ !, ಕೃತ್ಯವೆಸಗಿದ ಪಾಪಿ ಪತಿಯನ್ನು ಬಂಧಿಸಿದ ಪೊಲೀಸರು

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಬಿಯರ್ ತುಂಬಿದ ಲಾರಿ, ಸಿಕ್ಕಿದ್ದೇ ಚಾನ್ಸು ಎಂದು ಸ್ಥಳಕ್ಕೆ ಧಾವಿಸಿದ ಎಣ್ಣೆ ಪ್ರಿಯರು !

ಮಂಗಳೂರು: ಪತ್ನಿಗೆ ವಿಚ್ಛೇದನ ಕೊಡುವುದಕ್ಕೆ ವಿಳಂಬ ಮಾಡಿದ್ದಕ್ಕೆ ಜಡ್ಜ್‌ ಕಾರನ್ನೇ ಪುಡಿಗೊಳಿಸಿದ ಮಾಜಿ ಸೈನಿಕ..! ಅಂಗಡಿಯಿಂದ ದೊಣ್ಣೆ ಖರೀದಿಸಿ ಕೃತ್ಯ..!