Latestಕೃಷಿ ಸಂಪತ್ತುವೈರಲ್ ನ್ಯೂಸ್

4 ಎಕರೆ ಬಾಳೆ ತೋಟದಲ್ಲಿ ಸಿನಿಮಾ ನಟಿಯರು..! ನಿರೀಕ್ಷೆಗೂ ಮೀರಿ ಫಸಲು ಬಂದಿದೆ ಎಂದ ರೈತ..!

858
Pc Cr: NEWS 1 kannada

ನ್ಯೂಸ್ ನಾಟೌಟ್: ಮೈಸೂರಿನ ನಂಜನಗೂಡು ತಾಲೂಕಿನ ಕಕ್ಕನಹಟ್ಟಿ ಗ್ರಾಮದ ರೈತರೊಬ್ಬರು ತಮ್ಮ ಕೃಷಿ ಜಮೀನಿಗೆ ದೃಷ್ಟಿ ಆಗಬಾರದೆಂದು ಮಾಡಲ್​ ಗಳ ಫೋಟೋಗಳನ್ನು ಅಳವಡಿಸಿದ್ದಾರೆ. ಇದು ದಾರಿಹೋಕರ ಗಮನ ಸೆಳೆಯುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಕ್ಕನಹಟ್ಟಿ ಗ್ರಾಮದ ರೈತ ಸೋಮೇಶ್ ಜಮೀನಿನಲ್ಲಿ ಮಾಡೆಲ್ ​​ಗಳ ಫೋಟೋಗಳನ್ನು ಪ್ರತಿಷ್ಠಾಪಿಸಿದ್ದಾರೆ. ಮಾಡೆಲ್ ​ಗಳ ಫೋಟೋಗಳನ್ನ ತಮ್ಮ ಜಮೀನಿನ ಸುತ್ತ ಅಳವಡಿಸಿದ್ದಾರೆ.
ತನ್ನ ನಾಲ್ಕು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ಬೆಳೆ ಮೇಲೆ ಸಾರ್ವಜನಿಕರು ಮತ್ತು ದಾರಿಹೋಕರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳನ್ನ ಅಳವಡಿಸುವ ಬದಲು ಮಾಡೆಲ್​ ಗಳ ಫೋಟೋಗಳನ್ನ ಅಳವಡಿಸಿದ್ದಾನೆ. ಜಮೀನಿನ ಸುತ್ತ ಸುಮಾರು 10 ಸ್ಥಳಗಳಲ್ಲಿ ಮಾಡೆಲ್​ಗಳ ಚಿತ್ರಗಳು ರಾರಾಜಿಸುತ್ತಿವೆ.

ಇದನ್ನೂ ಓದಿ: ಸಾಲು ಸಾಲಾಗಿ ಬೈಕ್‌ ಗಳಲ್ಲಿ ಲಾಂಗ್ ಹಿಡಿದು ಸವಾರಿ..! ಮಧ್ಯರಾತ್ರಿ ಮಾರಕಾಸ್ತ್ರಗಳ ಜೊತೆ ಬೈಕ್ ವ್ಹೀಲಿಂಗ್..!

ಸಾರ್ವಜನಿಕರು ಈ ಜಮೀನು ಸುತ್ತಮುತ್ತ ಹೋಗುವಾಗ ತೋಟದ ಬೆಳೆಗಳನ್ನು ನೋಡದೇ, ಅಲ್ಲಿ ಅಳವಡಿಸಿರುವ ಮಾಡೆಲ್ ​​ಗಳನ್ನು ಕುಣ್ತುಂಬಿಕೊಂಡು ಹೋಗ್ತಿದ್ದಾರೆ. ಆ ಮೂಲಕ ಕೆಟ್ಟ ಕಣ್ಣುಗಳು ನನ್ನ ಬೆಳೆ ಮೇಲೆ ಬೀಳುತ್ತಿಲ್ಲ ಎಂದು ರೈತ ಸೋಮೇಶ್ ಹೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಇಂತಹ ಪ್ರಯತ್ನ ಕೆಲ ರೈತರು ಮಾಡಿದ ಬಗ್ಗೆ ವರದಿಯಾಗಿತ್ತು.

See also  ಸುಪ್ರೀಂಕೋರ್ಟ್​ನ ಹಿರಿಯ ಮಾಜಿ ವಕೀಲ ನಿಧನ, ಪದ್ಮಭೂಷಣ ಪುರಸ್ಕೃತ ಈ ಸಂವಿಧಾನ ತಜ್ಞನ ಬಗ್ಗೆ ಇಲ್ಲಿದೆ ಮಾಹಿತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget