Latestವಾಣಿಜ್ಯವೈರಲ್ ನ್ಯೂಸ್

37 ವರ್ಷದ ಹಿಂದೆ 10 ರೂ.ಗೆ ಖರೀದಿಸಿದ್ದ ರಿಲಯನ್ಸ್ ಷೇರುಗಳಿಂದ ಒಲಿದ ಅದೃಷ್ಟ..! 1988ರಲ್ಲಿ ಖರೀದಿಸಿದ್ದ 30 ಷೇರುಗಳ ಈಗಿನ ಬೆಲೆ ಎಷ್ಟು..?

1.5k
Spread the love

ನ್ಯೂಸ್ ನಾಟೌಟ್: ಬರೋಬ್ಬರಿ 37 ವರ್ಷಗಳ ಹಿಂದೆ ಖರೀದಿಸಿದ್ದ ರಿಲಯನ್ಸ್ ಷೇರಿನ ಬಾಂಡ್ ಈ ವ್ಯಕ್ತಿ ಕೈಗೆ ಸಿಕ್ಕಿದ್ದು ಅದೃಷ್ಟ ಖುಲಾಯಿಸುವಂತೆ ಮಾಡಿದೆ.
ಚಂಡೀಗಢ ಮೂಲದ ರಟ್ಟನ್ ದಿಲ್ಲನ್ ಈ ಒಂದು ಸಂತೋಷದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. X ನಲ್ಲಿ ರಿಲಯನ್ಸ್‌ ಷೇರುಗಳ ಫೋಟೋ ಹಂಚಿಕೊಂಡಿರುವ ರಟ್ಟನ್ ನನ್ನ ಮನೆಯಲ್ಲಿ ಇದು ನನಗೆ ಸಿಕ್ಕಿದೆ. ಆದರೆ ನನಗೆ ಷೇರು ಮಾರುಕಟ್ಟೆ ಬಗ್ಗೆ ಯಾವುದೇ ಜ್ಞಾನವಿಲ್ಲ. ಯಾರಾದರೂ ನನಗೆ ಇದರ ಬಗ್ಗೆ ಮಾರ್ಗದರ್ಶನ ನೀಡಬಹುದಾ ಎಂದು ಕೇಳಿಕೊಂಡಿದ್ದಾರೆ.

ರಟ್ಟನ್ ದಿಲ್ಲನ್ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಸಲಹೆಗಳ ಸುರಿಮಳೆಯೇ ಹರಿದು ಬಂದಿದೆ. ಕಮೆಂಟ್‌ಗಳು ಅಷ್ಟೇ ಅಲ್ಲ ಈ ಪೋಸ್ಟ್ ನೋಡಿ ಸರ್ಕಾರಿ ಸ್ವಾಮ್ಯದ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ (IEPFA) ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯುವಂತೆ ಸಲಹೆ ನೀಡಿದೆ.
ರಟ್ಟನ್ ದಿಲ್ಲನ್ ಚಂಡೀಗಢದ ನಿವಾಸಿಯಾಗಿದ್ದು, ಅವರ ಹಿರಿಯರು ರಿಲಯನ್ಸ್ ಇಂಡಸ್ಟ್ರೀಸ್‌ ಶೇರು ಖರೀದಿಸಿ ಮನೆಯಲ್ಲೇ ಇಟ್ಟಿದ್ದರು. ಇತ್ತೀಚೆಗೆ ಅವರ ಮನೆಯ ಹಳೆಯ ತಿಜೋರಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಬಾಂಡ್‌ ಪತ್ರಗಳು ಸಿಕ್ಕಿದೆ. 1988ರಲ್ಲಿ ಈ 30 ರಿಲಯನ್ಸ್ ಷೇರುಗಳನ್ನು ರಟ್ಟನ್ ಕುಟುಂಬಸ್ಥರು ಖರೀದಿ ಮಾಡಿದ್ದಾರೆ. ಅಂದಿಗೆ 10 ರೂಪಾಯಿ ಬೆಲೆಯ 30 ರಿಲಯನ್ಸ್‌ ಷೇರುಗಳು ರಟ್ಟನ್ ದಿಲ್ಲನ್ ಕೈ ಸೇರಿದೆ.

ಇವತ್ತಿನ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ಷೇರಿನ ಮೌಲ್ಯ 1 247 ರೂಪಾಯಿ 40 ಪೈಸೆ ಇದೆ. ಇದನ್ನು 37 ವರ್ಷದ ಹಳೆಯ 30 ಷೇರುಗಳಿಗೆ ಲೆಕ್ಕ ಹಾಕಿದಾಗ ಅಂದಾಜು 10 ಲಕ್ಷದ 7 ಸಾವಿರ ರೂಪಾಯಿಗಳಾಗುತ್ತದೆ. ಬೋನಸ್‌ ಅಂಕಗಳು ಸೇರಿದ್ರೆ ಸುಮಾರು 11 ಲಕ್ಷದ 88 ಸಾವಿರ ರೂಪಾಯಿ ಎನ್ನಲಾಗಿದೆ.

See also  ಬೆಂಗಳೂರು: ಮಧ್ಯ ರಾತ್ರಿ ಪಾನಮತ್ತಳಾಗಿ ದ್ವಿಚಕ್ರ ವಾಹನ ಓಡಿಸಿಕೊಂಡು ಹೋದವಳಿಗೆ ಅಪಘಾತ..! ಆಟೋ ರಿಕ್ಷಾ ಹತ್ತಿಸಿ ಕರೆದೊಯ್ದವರಿಂದ ಸಾಮೂಹಿಕ ಅತ್ಯಾಚಾರ..!
  Ad Widget   Ad Widget   Ad Widget