ಕರಾವಳಿ

ಉಡುಪಿಯಲ್ಲಿ ಮತ್ತೊಂದು ದಾರುಣ ಘಟನೆ..! ಆಟವಾಡಿಕೊಂಡಿದ್ದ ಬಾಲಕನಿಗೆ ಯಮನಾದ ರೆಸಾರ್ಟ್​ ಗೇಟ್..!

ನ್ಯೂಸ್ ನಾಟೌಟ್ : ಕೆಲದಿನಗಳ ಹಿಂದೆಯಷ್ಟೇ ಉಡುಪಿಯ ನೇಜಾರಿನಲ್ಲಿ ನಡೆದ ಘನಘೋರ ಘಟನೆಯನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ..ಅಷ್ಟರಲ್ಲಾಗಲೇ ಇದೀಗ ಮತ್ತೊಂದು ದಾರುಣ ಘಟನೆಯೊಂದು ನಡೆದಿದೆ.ಮನೆಯ ಸ್ಲೈಡಿಂಗ್ ಗೇಟ್ ಬಿದ್ದು ಬಾಲಕ ದಾರುಣವಾಗಿ ಅಂತ್ಯವಾಗಿರುವ ದುರಂತ ಕೋಟತಟ್ಟು ಎಂಬಲ್ಲಿ ನಡೆದಿದೆ. ಸುಶಾಂತ್ (03) ದುರಂತ ಅಂತ್ಯ ಕಂಡ ಬಾಲಕ.

ಸುಶಾಂತ್​​ ಸುಧೀರ್ ಕೋಟ್ಯಾನ್ ಶಾರದಾ ದಂಪತಿಯ ಪುತ್ರ. ಮನೆಯ ಬಳಿ ಎಂದಿನಂತೆ ಖುಷಿ ಖುಷಿಯಿಂದ ಆಟವಾಡಿಕೊಂಡಿದ್ದ.ಈ ವೇಳೆ ಗೇಟ್ ಜಾರಿ ಮೈ ಮೇಲೆ ಬಿದ್ದಿದೆ.ರೆಸಾರ್ಟ್​ನ ಗೇಟ್ ಪೃಥ್ವಿರಾಜ್ ಎಂಬವವರಿಗೆ ಸಂಬಂಧಿಸಿದ್ದಾಗಿದೆ.ಪುಟ್ಟ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸುಳ್ಯ:NMC, ನೇಚರ್ ಕ್ಲಬ್ ವತಿಯಿಂದ ‘ಸಹ್ಯಾದ್ರಿ ಬೆಟ್ಟಗಳು’- ಚಿತ್ರಪಟ ರಚನೆ ಸ್ಪರ್ಧೆ

ಡಿ. 1 ರಿಂದ  ಫೇಸ್ ಬುಕ್ ನಲ್ಲಿ   ‘ಧಾರ್ಮಿಕ ಮಾಹಿತಿ ನಿಷೇಧ

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಕೇಸ್ ಪ್ರಕರಣಕ್ಕೆ ಟ್ವಿಸ್ಟ್..! ವಿದ್ಯಾರ್ಥಿನಿಯರ ಫೋನ್ ಗುಜರಾತ್​ಗೆ ರವಾನಿಸಿದ ಪೊಲೀಸರು?