ವೈರಲ್ ನ್ಯೂಸ್ಶಿಕ್ಷಣಸುಳ್ಯ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಶೇ.99.17 ಫಲಿತಾಂಶದೊಂದಿಗೆ ಮಿಂಚಿದ ಸುಳ್ಯದ NMPUC ವಿದ್ಯಾರ್ಥಿಗಳು..!

167

ನ್ಯೂಸ್ ನಾಟೌಟ್: ದ್ವಿತೀಯ ಪಿ.ಯು.ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಸುಳ್ಯದ ನೆಹರೂ ಮೆಮೋರಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಶೇ.99.17 ಫಲಿತಾಂಶದೊಂದಿಗೆ ಮಿಂಚಿದ್ದಾರೆ.

ಒಟ್ಟು ಪರೀಕ್ಷೆಗೆ 121 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 120 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 46 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 72 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯ ಅಂಕ ಗಳನ್ನು ಗಳಿಸಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 73 ವಿದ್ಯಾರ್ಥಿಗಳಲ್ಲಿ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.98.63, ವಾಣಿಜ್ಯ ವಿಭಾಗದ 38 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ.100 ಮತ್ತು ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 10 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದ ಕೆ.ಸಹನಾ ಭಟ್ 575 ,ವಾಣಿಜ್ಯ ವಿಭಾಗದ ಮರಿಯಮತ್ ಹಬ್ಸಿನ 587 ಮತ್ತು ಕಲಾ ವಿಭಾಗದ ಅಮೃತ ಹೆಚ್ 562 ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ.

ಅತ್ಯುತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನ ಅಧ್ಯಕ್ಷರು,ಆಡಳಿತ ಮಂಡಳಿ, ಪ್ರಾ oಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

See also  ಕೊಡಗು: ಕನ್ನಡ ರಾಜ್ಯೋತ್ಸವದ ಸಂಭ್ರಮದ ಜೊತೆ ತಮಿಳು ಚಿತ್ರ ಪೋಸ್ಟರ್‌ಗಳಿಗೆ ಮಸಿ..! ಪೊಲೀಸರು ಬಂದು ಮಾಡಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget