Latestಕರಾವಳಿರಾಜ್ಯಶಿಕ್ಷಣ

ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ವೇಳಾಪಟ್ಟಿ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ

573

ನ್ಯೂಸ್ ನಾಟೌಟ್: ಇಂದು (ಏಪ್ರಿಲ್ 08) ಮಧ್ಯಾಹ್ನವಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಯಾದಗಿರಿ ಕೊನೆ ಸ್ಥಾನ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಮೊದಲ ಪರೀಕ್ಷೆಯಲ್ಲಿ ಅನುರ್ತೀಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಮರುಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಏಪ್ರಿಲ್ 24ರಿಂದ ಮೇ 8ರ ವರೆಗೆ ಮರುಪರೀಕ್ಷೆಗಳು ನಡೆಯಲಿವೆ. ಹಾಗಾಗಿ ವಿದ್ಯಾರ್ಥಿಗಳು ಮೊದಲ ಪರೀಕ್ಷೆಯಲ್ಲಿ ಫೇಲ್ ಆಗಿದ್ದೇವೆ ಎಂದು ಕೊರಗುವ ಬದಲು 2ನೇ ಪರೀಕ್ಷೆಗೆ ಅರ್ಜಿ ಹಾಕಿ ಬರೆದು ಉತ್ತೀರ್ಣರಾಗಬಹುದು.
ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವೇಳಾಪಟ್ಟಿ ಈ ಕೆಳಗಿನಂತಿದೆ.

24-4-25: ಕನ್ನಡ, ಅರೇಬಿಕ್
25-4-25: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ
26-4-25: ಇತಿಹಾಸ, ಭೌತಶಾಸ್ತ್ರ
27-4-25: ಭಾನುವಾರ (ರಜಾ ದಿನ)
28-4-25: ಭೂಗೋಳಶಾಸ್ತ್ರ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
29-4-25: ಇಂಗ್ಲೀಷ್
30-4-25: ಬಸವ ಜಯಂತಿ (ರಜಾ ದಿನ)
01-05-25: ಕಾರ್ಮಿಕ ದಿನಾಚರಣೆ (ರಜಾ ದಿನ)
02-05-25: ತರ್ಕಶಾಸತ್ರ, ವ್ಯವಹಾರ ಶಾಸ್ತ್ರ, ಗಣಿತ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ.
03-05-25: ಸಮಾಜಶಾಸ್ತ್ರ, ಭೂರ್ಗರ್ಭಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕಶಾಸ್ತ್ರ
04-05-25: ಭಾನುವಾರ (ರಜಾ ದಿನ)
05-05-25: ಅರ್ಥಶಾಸ್ತ್ರ
06-05-25: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
07-5-25: ಹಿಂದಿ
08-05-25: ತಮಿಳು, ತೆಲುಗು,ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.

ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ದಿನಾಂಕ 08-04-2025 ರಿಂದ 17-04-2025 ರ ನೊಂದಾಯಿಸಿಕೊಳ್ಳಬೇಕು. ದಂಡ ಸಹಿತ – 16-04-2025 ರಿಂದ 17-04-2025 ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜಿನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ದೇವಿ ಮಂದಿರಕ್ಕೆ ಬಂದ ಭಕ್ತರ ಮೇಲೆ ಚಪ್ಪಲಿ, ಬೆಲ್ಟ್‌ ಗಳಿಂದ ಹಲ್ಲೆ..! 4 ಮಂದಿ ವ್ಯಾಪಾರಿಗಳು ಅರೆಸ್ಟ್..!

ಚಲಿಸುತ್ತಿದ್ದಾಗಲೇ ಎರಡು ತುಂಡಾದ ಎಕ್ಸ್‌ ಪ್ರೆಸ್ ರೈಲು..! ಪ್ರಯಾಣಿಕರು ಪಾರಾದದ್ದೇಗೆ..?

ಸರ್ಕಾರಿ ಉದ್ಯೋಗ ಹಾಗೂ ಸವಲತ್ತು ಪಡೆಯಲು ರೈಲ್ವೆ ಇಲಾಖೆಯಲ್ಲಿದ್ದ ಪತಿಯನ್ನು ಹತ್ಯೆಗೈದ ಪತ್ನಿ..! ಹೃದಯಾಘಾತದ ಕಥೆ ಕಟ್ಟಿದ್ದ ಆಕೆ ಸಿಕ್ಕಿಬಿದ್ದದ್ದೇಗೆ..?

See also  ಕುದಿಯುತ್ತಿದ್ದ ಎಣ್ಣೆ ಬಾಣಲೆಗೆ ಹಾರಿ ಬೇಕರಿ ಕೆಲಸಗಾರ ಆತ್ಮಹತ್ಯೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget