ಕರಾವಳಿಕ್ರೈಂ

ಹೂಡಿಕೆಯಲ್ಲಿ ಅಧಿಕ ಲಾಭ ನೀಡುವುದಾಗಿ ಜನರನ್ನು ನಂಬಿಸಿ 27.96 6 ಲಕ್ಷ ರೂ. ವಂಚಿಸಿದ ವಿದ್ಯಾರ್ಥಿ!

ನ್ಯೂಸ್‌ ನಾಟೌಟ್‌: ಹೆಚ್ಚಿನ ಹಣ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಿರಿ ಎಂದು ಜನರನ್ನು ನಂಬಿಸಿ 27.96 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಮಂಗಳೂರಿನ ಸುರತ್ಕಲ್‌ನ ಎನ್‌ಐಟಿಕೆಯ ವಿದ್ಯಾರ್ಥಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಸುರತ್ಕಲ್‌ನ ಎನ್‌ಐಟಿಕೆಯ 4ನೇ ವರ್ಷದ ವಿದ್ಯಾರ್ಥಿ ಯಶ್‌ವರ್ಧನ್ ಜೈನ್ ಆಲಿಯಾಸ್ ವೈವಿಜೆ ಎಂದು ಗುರುತಿಸಲಾಗಿದೆ. ಈತ 2022ರ ಮಾರ್ಚ್‌ನಿಂದ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಎನ್‌ಐಟಿಕೆ ವಿದ್ಯಾರ್ಥಿಗಳಿಗೆ ಹಣದ ಹೂಡಿಕೆಯಲ್ಲಿ ಒಂದು ವಾರದಲ್ಲಿ ಶೇ.10ರಷ್ಟು ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡಿದ್ದಾನೆ. ಅಕ್ಟೋಬರ್‌ನಲ್ಲಿ ದೇಶಾದ್ಯಂತ ಜನರನ್ನು ವಂಚಿಸುವುದಕ್ಕಾಗಿ ‘ವೈವಿಜೆ ಇನ್ವೆಸ್ಟ್‌ಮೆಂಟ್ ಎಂಟರ್‌ಪ್ರೈಸಸ್ ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಆರಂಭಿಸಿದ್ದ. ಆ ಗ್ರೂಪ್‌ನಲ್ಲಿ 981 ಮಂದಿ ಸದಸ್ಯರಿದ್ದರು. ಅದರಲ್ಲಿ ಹೆಚ್ಚಾಗಿ ಎನ್‌ಐಟಿಕೆ ವಿದ್ಯಾರ್ಥಿಗಳು ಹಾಗೂ ಇತರ ಕೆಲವು ಕಾಲೇಜಿನ ವಿದ್ಯಾರ್ಥಿಗಳಿದ್ದರು.

2022ರ ಜೂ.26ರಿಂದ 2023ರ ಜ.3ರವರೆಗೆ ಹಂತ ಹಂತವಾಗಿ 27.96 ಲ.ರೂ.ಗಳನ್ನು ಆರೋಪಿ ಯಶ್‌ವರ್ಧನ್ ಜೈನ್‌ನ ಖಾತೆಗೆ ಪಾವತಿಸಿಕೊಂಡಿದ್ದಾನೆ. ಆರಂಭದಲ್ಲಿ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ 1 ತಿಂಗಳ ಕಾಲ ಹೂಡಿಕೆಯ ಮೇಲೆ ಲಾಭಾಂಶವನ್ನು ಎಲ್ಲರಿಗೂ ನೀಡಿದ್ದ. ಬಳಿಕ ಯಾವುದೇ ಹಣ ನೀಡಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಮಂಗಳೂರಿನ ಸೆನ್ ಪೊಲೀಸ್ ಠಾಣೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.

Related posts

ನಟಿ ಲೀಲಾವತಿ ಅಂತಿಮ ದರ್ಶನ ಪಡೆದ ವಿನೋದ್‌ ರಾಜ್ ಪತ್ನಿ,ಮಗ-ಲೀಲಮ್ಮ ಸೊಸೆ ಎಲ್ಲಿಯವರು?ಮೊಮ್ಮಗ ಈಗ ಏನ್ಮಾಡ್ತಿದ್ದಾರೆ? ಇಲ್ಲಿದೆ ಡಿಟೇಲ್ಸ್..

ಪುತ್ತೂರು: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಯುಪಿ ಫೈಯರ್ ಬ್ರ್ಯಾಂಡ್ ,ಬಜರಂಗದಳ ನಿ‍ಷೇಧ ದೇಶದ್ರೋಹಿ ಕೆಲಸ-ಯುಪಿ ಸಿಎಂ ಟೀಕಾಸ್ತ್ರ

ವಿಟ್ಲ: ಶಾಲೆಗೆ ನುಗ್ಗಿದ ಕಿಡಿಗೇಡಿಗಳಿಂದ ಸ್ವತ್ತುಗಳಿಗೆ ಹಾನಿ, ಗೋಡೆಯಲ್ಲಿ ಅಶ್ಲೀಲ ಬರಹ..!, ಈ ಶಾಲೆಯ ಬಗ್ಗೆ ಅಷ್ಟೊಂದು ಕೋಪವೇಕೆ..?