ನ್ಯೂಸ್ ನಾಟೌಟ್: ಇಲ್ಲೊಂದು ಸಾಕು ನಾಯಿ 24 ಸಾಕ್ಸ್ ಗಳನ್ನು ಹಾಗೂ ಇತರೆ ವಸ್ತುಗಳನ್ನು ತಿಂದು ಆಸ್ಪತ್ರೆಗೆ ಸೇರಿದೆ. ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ. ಮನೆಯ ನಾಯಿ ಸಾಕ್ಸ್ ಗಳನ್ನು ತಿಂದು ಅನಾರೋಗ್ಯಗೊಂಡಿದೆ. ಟೈ, ಸಾಕ್ಸ್, ಶೂ ಇನ್ಸರ್ಟ್ ಸೇರಿ ಹಲವು ವಸ್ತುಗಳನ್ನು ತಿಂದಿತ್ತು ಎನ್ನಲಾಗಿದೆ.
ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ನಾಯಿಯ ಜೀವ ಉಳಿಸಲಾಗಿದೆ ಎಂದು ಕೊರೊನಾ ಅನಿಮಲ್ ಎಮರ್ಜೆನ್ಸಿ ಸೆಂಟರ್ ತಿಳಿಸಿದೆ. ನಾಯಿ ಇದೆಲ್ಲಾ ತಿಂದ ಬಳಿಕ ವಾಂತಿ ಮಾಡಲು ಶುರು ಮಾಡಿತ್ತು. ಹೊಟ್ಟೆ ಊದಿಕೊಂಡಿತ್ತು, ಏನೋ ಗಂಭೀರ ಸಮಸ್ಯೆ ಇದೆ ಎಂದು ಮನೆಯ ಮಾಲೀಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಬಟ್ಟೆಗಳು ಕರುಳಿನಲ್ಲಿ ಸಿಕ್ಕಿಹಾಕಿಕೊಂಡಿರುವುದು ತಿಳಿದಿದೆ.
View this post on Instagram
ಸಾಕ್ಸ್ ಗಳ ಎಕ್ಸ್ ರೇ ಫೋಟೋಗಳು ಕ್ಲಿನಿಕ್ ಪೋಸ್ಟ್ ಮಾಡಿದೆ. ನಾಯಿ ಮಾಲಿಕ ಇದನ್ನು ನೋಡಿ ಅಚ್ಚರಿಪಟ್ಟಿದ್ದಾರೆ.