ದೇಶ-ವಿದೇಶವೈರಲ್ ನ್ಯೂಸ್

22ನೇ ವಯಸ್ಸಿನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಶಾಕ್..! 48 ವರ್ಷಗಳ ಬಳಿಕ ಮನೆಗೆ ಬಂದ ಆಫರ್‌ ಲೆಟರ್..!

224

ನ್ಯೂಸ್ ನಾಟೌಟ್: ಇಂಗ್ಲೆಂಡ್‌ನಲ್ಲಿ ಅಚ್ಚರಿಯ ಸಂಗತಿಯೊಂದು ನಡೆದಿದೆ. ಉದ್ಯೋಗಕ್ಕೆಂದು ಅರ್ಜಿ ಸಲ್ಲಿಸಿದ ಮಹಿಳೆಯೊಬ್ಬರು ಆ ಕೆಲಸದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಬಿಟ್ಟಿದ್ದರು. ಆದರೆ ಈ ಮಹಿಳೆಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ಬರೋಬ್ಬರಿ 48 ವರ್ಷಗಳ ನಂತರ ಜಾಬ್‌ ಆಫರ್‌ ಬಂದಿದೆ.

48 ವರ್ಷಗಳ ಹಿಂದೆ ಟಿಝಿ ಹಾಡ್ಸನ್ (70 ವರ್ಷ) ಎಂಬ ಮಹಿಳೆ ಕೆಲಸಕ್ಕೊಂದು ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಅವರ ಜೀವನದ ಕನಸಾಗಿತ್ತು, ಅವರೊಬ್ಬರು ಸ್ಟಂಟ್ ವುಮನ್ ಆಗಿದ್ದರು. ಆರಂಭದಲ್ಲಿ ಐದಾರು ತಿಂಗಳ ಕಾಲ ಪ್ರತಿದಿನ ಅರ್ಜಿಯ ಪ್ರತಿಕ್ರಿಯೆಗಾಗಿ ಈ ಮಹಿಳೆ ಕಾಯುತ್ತಿದ್ದರಂತೆ. ಆದರೆ ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ರಿಪ್ಲೈಗಳು ಬಂದಿರಲಿಲ್ಲ. ಕೊನೆಗೆ ಹತಾಶೆಗೊಂಡು ಬೇರೆ ಕಡೆ ಕೆಲಸ ಹುಡುಕತೊಡಗಿದ್ದರು. ಆದರೆ ಇದೀಗ 48 ವರ್ಷಗಳ ನಂತರ ಟಿಝಿ ಹಾಡ್ಸನ್ ಅವರ ಉದ್ಯೋಗ ಅರ್ಜಿಗೆ ಉತ್ತರ ಸಿಕ್ಕಿದೆ. ಆಫರ್ ಲೆಟರ್ ನೋಡಿ ಅವರೂ ಶಾಕ್ ಆಗಿದ್ದಾರೆ.

ಮತ್ತೊಂದೆಡೆ, ಟಿಝಿ ಹಾಡ್ಸನ್ ತನ್ನ ಕೆಲಸದ ಅರ್ಜಿಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಆಫ್ರಿಕಾಕ್ಕೆ ಹೋಗಿದ್ದರು. ಅಲ್ಲಿ ಅವರು ಏರೋಬ್ಯಾಟಿಕ್ ಪೈಲಟ್ ಮತ್ತು ಬೋಧಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಟಿಝಿ ಹಾಡ್ಸನ್, ‘ನನ್ನ ಉದ್ಯೋಗ ಅರ್ಜಿಗೆ ಏಕೆ ಪ್ರತಿಕ್ರಿಯೆ ಬಂದಿಲ್ಲ ಎಂದು ನಾನು ಯಾವಾಗಲೂ ಕಾಯುತ್ತಿದ್ದೆ, ಇದೀಗ ಇದನ್ನು ನೋಡಿ ಆಶ್ಚರ್ಯವಾಗಿದೆ. ಆದರೆ ಇಷ್ಟು ದಿನ ಕಳೆದರೂ ಉದ್ಯೋಗ ಪತ್ರ ಸಿಕ್ಕಿರುವುದು ನನಗೆ ವಿಶೇಷವಾಗಿದೆ’ ಎಂದು ಹೇಳಿದ್ದಾರೆ.

Click

https://newsnotout.com/2024/10/vinesh-pogat-election-win-kannada-news-viral-news/
https://newsnotout.com/2024/10/cake-and-food-poisoning-order-cancel-viral-news/
https://newsnotout.com/2024/10/baby-and-perents-pilgrims-kannada-news-12-years-matter-ka/
https://newsnotout.com/2024/10/political-kannada-news-viral-news-vinesh-pogat-kannada-news-hariyan/
https://newsnotout.com/2024/10/theef-kannada-news-different-way-of-approch-viral-bengaluru/
https://newsnotout.com/2024/10/school-6year-salary-kananda-news-school-issue-kannada-news/
See also  ಡಿಕೆಶಿ 9 ವರ್ಷದ ಬಾಲಕಿಯನ್ನು ಅಪಹರಿಸಿ ಆಸ್ತಿ ಬರೆಸಿದ್ದಾನೆ ಎಂದ ದೊಡ್ಡ ಗೌಡರು..! ಏನಿದು ಆರೋಪ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget