ನ್ಯೂಸ್ ನಾಟೌಟ್: ಕಳೆದ 35 ವರ್ಷಗಳಿಂದ ತಲೆಮರೆಸಿಕೊಂಡು ನ್ಯಾಯಾಲಯಕ್ಕೂ ಹಾಜರಾಗದೆ ನಾಪತ್ತೆಯಾಗಿದ್ದ ತಲ್ವಾರು ದಾಳಿ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಕೇರಳದ ತ್ರಿಶ್ಯೂರ್ ಜಿಲ್ಲೆಯ ಬಾಲನ್ (73). ಈತ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ 1990ರಲ್ಲಿ ಇತರ ಆರೋಪಿಗಳೊಂದಿಗೆ ಅಕ್ರಮ ಕೂಟ ಸೇರಿ ಶಾಂತಪ್ಪ ಮತ್ತು ಸುಬ್ಬಯ್ಯ ರವರಿಗೆ ತಲ್ವಾರ್ ನಿಂದ ಕಡಿದು ತೀವ್ರ ಸ್ವರೂಪದ ರಕ್ತ ಗಾಯ ಮಾಡಿರುತ್ತಾನೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಅ.ಕ್ರ. 64/1990 U/s 143,147, 148,324,326,506 r/w 149 ಐಪಿಸಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದು, ತ್ರಿಶ್ಯೂರ್ ನಲ್ಲಿ ಬಂಧಿಸಿ ಸುಳ್ಯಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಈ ಕಾರ್ಯಾಚರಣೆಯಲ್ಲಿ ಠಾಣಾ ಎಎಸ್ಐ ಉದಯ್‌ಕುಮಾರ್, ಎಚ್‌ಸಿ 359 ರಮೇಶ್ ಲಮಾಣಿ, ಪಿಸಿ 437 ಸತೀಶ್ ಅಹೇರಿ ಅವರು ಪಾಲ್ಗೊಂಡಿದ್ದರು.













