ಯೋಧನ ಮನವಿಯನ್ನು ನಿರಾಕರಿಸಿದ್ರಾ ಕೊಹ್ಲಿ..? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ವಿರಾಟ್ ಕೊಹ್ಲಿ ಕ್ರಿಕೆಟ್​ ಲೋಕದ ಸಾಮ್ರಾಟ. ಕೊಹ್ಲಿಗೆ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅದೊಂದು ವಿಡಿಯೋ ಕೊಹ್ಲಿ ಮೇಲೆ ಸಹಸ್ರಾರು ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದೆ. ದೇಶ ಕಾಯುವ ಸೈನಿಕನ ಸೆಲ್ಫಿ ಮನವಿಗೆ ವಿರಾಟ್ ಕೊಹ್ಲಿ ನಿರಾಕರಿಸಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಮತ್ತು ದೇಶದ ಭದ್ರತೆಗಾಗಿ ಹಗಲಿರುಳು ಶ್ರಮಿಸುವ ಯೋಧನೊಂದಿಗೆ ವಿರಾಟ್ ಸೆಲ್ಫಿ ತೆಗೆದುಕೊಂಡಿದ್ದರೆ ಏನಾಗುತ್ತಿತ್ತು ಎಂದು ಹಲವರು ಕೊಹ್ಲಿಯನ್ನು ಪ್ರಶ್ನಿಸುತ್ತಿದ್ದಾರೆ. ಈ ವೈರಲ್ ವಿಡಿಯೋ ಮುಂಬೈನದ್ದಾಗಿದ್ದು, ವಿರಾಟ್ ಕಾರಿನಿಂದ ಇಳಿದು ಸ್ವಲ್ಪ ದೂರ ನಡೆದ ನಂತರ ಒಂದೆಡೆ ನಿಲ್ಲುತ್ತಾರೆ. ಈ ವೇಳೆ ಅಲ್ಲಿಯೇ ನಿಂತಿದ್ದ ಸೈನಿಕನೊಬ್ಬ ತನ್ನ ಮೊಬೈಲ್ ಫೋನ್ ತೆಗೆದು ಸೆಲ್ಫಿಗಾಗಿ ಕೊಹ್ಲಿ ಬಳಿ ವಿನಂತಿಸುತ್ತಾನೆ. ಆದರೆ ವಿರಾಟ್ ತನ್ನ ಕೈಗಳಿಂದ ಸನ್ನೆ ಮಾಡುವ ಮೂಲಕ ಯೋಧನ ಸೆಲ್ಫಿ ಮನವಿಯನ್ನು ನಿರಾಕರಿಸುತ್ತಾರೆ. ಇದು ವಿವಾದಕ್ಕೆ ಕಾರಣವಾಗಿದೆ. Click