ನ್ಯೂಸ್ ನಾಟೌಟ್: ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಪ್ರೀತಿ (love) ಚಿಗುರಲು ಮನಸ್ಸೇ ಹೊರತು ವಯಸ್ಸಲ್ಲ. ಇದಕ್ಕೆ ಒಂದು ಪ್ರತ್ಯಕ್ಷ ಉದಾಹಣೆ ಅಸ್ಸಾಂನ ಗುವಾಹಟಿ (Guwahati)ಯ ಜೋಡಿ. ಹೌದು, ವಯಸ್ಸು 65 ಗಡಿ ದಾಟಿದ ಮೇಲೆ ಇಬ್ಬರಿಗೂ ಪ್ರೀತಿ ಶುರುವಾಗಿದೆ. ಮಾತ್ರವಲ್ಲ ಮದುವೆಯೂ ಆಗಿದ್ದಾರೆ.ಅಷ್ಟಕ್ಕೂ ಅವರಿಬ್ಬರಿಗೆ ಪ್ರೀತಿ ಶುರುವಾಗಿದ್ದು ವೃದ್ಧಾಶ್ರಮದಲ್ಲಿ ಅಂದ್ರೆ ನೀವು ನಂಬ್ತೀರಾ?
ತಮ್ಮವರಿಂದ ದೂರವಾಗಿ ವೃದ್ಧಾಶ್ರಮ ಸೇರಿದ್ದವರಿಗೆ ಈಗ ವೃದ್ಧಾಶ್ರಮದಲ್ಲಿಯೇ ದಾಂಪತ್ಯದ ಸವಿ ಸವಿಯುವ ಅವಕಾಶ ಸಿಕ್ಕಿದೆ.ಇಬ್ಬರಿಗೂ ವೃದ್ದಾಶ್ರಮದಲ್ಲಿ ಪ್ರೀತಿ ಚಿಗುರಿದೆ.ಬಳಿಕ ವೃದ್ದಾಶ್ರಮದಲ್ಲಿಯೇ ಮದುವೆಯೂ ಆಗಿದೆ.ಈ ಅಪರೂಪದ ಘಟನೆ ನಡೆದಿರೋದು ಗುವಾಹಟಿಯ ಸ್ಮಾರಕ ವೃದ್ಧಾಶ್ರಮದಲ್ಲಿ.ಮದುವೆಯಾದ ಪದ್ಮೇಶ್ವರ ಗೋವಾಲ ಅವರಿಗೆ 71 ವರ್ಷವಾದ್ರೆ ಅವರ ಪತ್ನಿ ಜಯಪ್ರಭಾ ಅವರಿಗೆ 65 ವರ್ಷ.ಕಳೆದ ಒಂದು ವರ್ಷದ ಹಿಂದೆ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದ್ದು, ಇದೀಗ ಮದುವೆಯಾಗಿದೆ.
ಹಾಡಲ್ಲಿ ಹುಟ್ಟಿದ ಪ್ರೀತಿ
ಜಯಪ್ರಭಾ, ವೃದ್ಧಾಶ್ರಮಕ್ಕೆ ಬಂದಾಗ ಹಾಡೊಂದು ಕೇಳಿದೆ. ಅದು ಬಿಹು ಹಾಡು. ಸುಂದರ ಧ್ವನಿಗೆ ಜಯಪ್ರಭಾ ಕರಗಿ ಹೋಗಿದ್ದಾರೆ. ಈ ಹಾಡನ್ನು ಹಾಡ್ತಿದ್ದಿದ್ದು ಪದ್ಮೇಶ್ವರ್ ಎಂಬುದು ಜಯಪ್ರಭಾ ಅವರಿಗೆ ಗೊತ್ತಾಗಿದೆ. ಇದೇ ಹಾಡಿನ ಮೂಲಕ ಇಬ್ಬರು ಹತ್ತಿರವಾಗಿದ್ದಾರೆ. ಮೊದಲ ದಿನದಿಂದಲೇ ಇಬ್ಬರ ಮಧ್ಯೆ ವಿಶೇಷ ಬಾಂಡಿಂಗ್ ಬೆಳೆದಿದೆ. ಒಟ್ಟಿಗಿದ್ದಾಗ ಸಂತೋಷವಾಗಿರ್ತಿದ್ದ ಅವರನ್ನು ಆಶ್ರಮದ ಉತ್ಪಲ್ ಹರ್ವವರ್ಧನ್ ಗಮನಿಸಿದ್ದಾರೆ. ಇವರಿಬ್ಬರು ಪ್ರೀತಿ ಮಾಡ್ತಿದ್ದಾರೆ ಎಂಬುದನ್ನು ತಿಳಿದು, ಮದುವೆ ಪ್ರಸ್ತಾಪವನ್ನು ಇಟ್ಟಿದ್ದಾರೆ.
ಅದ್ಧೂರಿ ಮದುವೆ :
ಆಶ್ರಮದಲ್ಲಿ ಮದುವೆ ಸಮಾರಂಭ ಸಂಭ್ರಮದಿಂದ ನಡೆಯಿತು.ಇದು ಆಶ್ರಮ ವಾಸಿಗಳಿಗೆ ಖುಷಿ ನೀಡಿದೆ. ಪ್ರತಿಯೊಬ್ಬರೂ ಮದುವೆಯನ್ನು ಎಂಜಾಯ್ ಮಾಡಿದ್ದಾರೆ. ಅರಿಶಿನ, ಮೆಹಂದಿ ಸೇರಿದಂತೆ ಎಲ್ಲ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ. ಮದುವೆಗೆ 4000 ಅತಿಥಿಗಳು ಹಾಜರಿದ್ದು,ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಜಯಪ್ರಭಾ ಮದುವೆಗೆ ಮೇಖೇಲಾ ಸಡೋರ್ ಧರಿಸಿದ್ದು,ಪದ್ಮೇಶ್ವರ್ ಧೋತಿ ಕುರ್ತಾ ಧರಿಸಿದ್ದರು. ಪಾರ್ಲರ್ ಗೆ ಹೋಗಿ ಜಯಪ್ರಭಾ ಮೇಕಪ್ ಮಾಡ್ಕೊಂಡಿದ್ದರು. ಒಂದು ಗಂಟೆಯಲ್ಲಿ ಎಲ್ಲ ಶಾಸ್ತ್ರಗಳು ಮುಗಿದು, ಇಬ್ಬರು ದಂಪತಿಯಾದ್ರು. ಜಯಪ್ರಭಾ ತಮ್ಮ ಪ್ರೀತಿಯ ಪತಿಗೆ ಬಾಬು ಅಂತ ಕರೆದ್ರೆ ಪದ್ಮೇಶ್ವರ್, ಜಯಪ್ರಭಾ ಅವರನ್ನು ಜಾನ್ ಎಂದು ಕರೆಯುತ್ತಾರೆ. ಇಬ್ಬರಿಗೂ ಆಶ್ರಮದಲ್ಲಿ ರೂಮ್ ವ್ಯವಸ್ಥೆಯನ್ನೇ ಮಾಡಲಾಗಿದೆ.