ನ್ಯೂಸ್ ನಾಟೌಟ್: ಕಲ್ಮಕಾರು ಪಾಂಡಿಗದ್ದೆ ಎಂಬಲ್ಲಿ ವಿಷಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು(ಜ.29) ನಡೆದಿದೆ.
ಮಹಿಳೆಯನ್ನು 47 ವರ್ಷ ವಯಸ್ಸಿನ ಭಾಗಿರಥಿ ಎಂದು ಗುರುತಿಸಲಾಗಿದೆ.
ವಿಷ ಸೇವಿಸಿ ಒದ್ದಾಡುತ್ತಿದ್ದವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ , ಅಷ್ಟರಲ್ಲಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸ್ ದೂರು ದಾಖಲಾಗಿದೆ.