ನ್ಯೂಸ್ ನಾಟೌಟ್ : ಕಳೆದ 7 ದಿನಗಳ ಹಿಂದೆ ಸುಳ್ಯ ಆಲೆಟ್ಟಿ ಗ್ರಾಮದಿಂದ ನಾಪತ್ತೆಯಾಗಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳು ಉಡುಪಿಯಲ್ಲಿ ಪತ್ತೆಯಾಗಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.ಉಡುಪಿಯ ಕಟಪಾಡಿಯಲ್ಲಿರುವ ಮಹಿಳೆಯ ತಾಯಿ ಮನೆಯಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಏಳು ದಿನಗಳ ಹಿಂದೆ ಗಂಡ ಹೆಂಡತಿ ಕ್ಷುಲ್ಲಕ ಕಾರಣದಿಂದ ಜಗಳವಾಗಿತ್ತು ಎನ್ನಲಾಗಿದೆ. ಸುಳ್ಯ ಪರಿವಾರಕಾನದಲ್ಲಿರುವ ರಾಜೇಂದ್ರ ಎಂಬವರ ಪತ್ನಿಯಾಗಿದ್ದ ನಂದಿನಿ ಮತ್ತು ಇಬ್ಬರು ಮಕ್ಕಳು ಮನೆಯಿಂದ ನಾಪತ್ತೆಯಾಗಿರುವ ಪ್ರಕರಣ ನಡೆದಿತ್ತು.ಇತ್ತ ರಾಜೇಂದ್ರರವರು ತಮ್ಮ ಕೆಲಸ ಮುಗಿಸಿ ಮನೆಗೆ ಬರುವ ವೇಳೆ ಹೆಂಡತಿ ಮಕ್ಕಳು ಮನೆಯಲ್ಲಿ ಇರಲಿಲ್ಲ.ಹೀಗಾಗಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪತ್ರಿಕೆಗಳಲ್ಲಿ ಈ ಕುರಿತು ವರದಿಯಾದಾಗ, ನಂದಿನಿಯವರು ತಮ್ಮ ತಾಯಿ ಮನೆಗೆ ತೆರಳಿದ್ದರು ಎನ್ನಲಾಗಿದೆ.
ಅಲ್ಲಿಂದ ಸುಳ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿಯವರ ಕ್ಷಿಪ್ರ ಕಾರ್ಯಾಚರಣೆ ವೇಳೆ ಉಡುಪಿಯಲ್ಲಿ ಪತ್ತೆಯಾಗಿದ್ದಾರೆ.ಬಳಿಕ ಅವರನ್ನು ಸುಳ್ಯ ಠಾಣೆಗೆ ಕರೆತರಲಾಯಿತು. ಠಾಣೆಯಲ್ಲಿ ಮಾತುಕತೆ ನಂತರ ಗಂಡ ರಾಜೇಂದ್ರ ಅವರೊಂದಿಗೆ ಕಳುಹಿಸಿಕೊಡಲಾಗಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.