‘ಕೈ ನಡುಕ, ಅಸ್ಪಷ್ಟ ಮಾತು’ ಪುನೀತ್ ರಾಜ್ ಕುಮಾರ್ ನ ಆಪ್ತ ವಿಶಾಲ್‌ ಗೆ ಏನಾಗಿದೆ..? ನಟನ ಆಘಾತಕಾರಿ ವಿಡಿಯೋ ವೈರಲ್..!

ನ್ಯೂಸ್ ನಾಟೌಟ್: ‘ಮದಗಜರಾಜ’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ತಮಿಳು ನಟ ವಿಶಾಲ್ ನಡುಗುವ ಕೈಗಳಿಂದ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದ್ದು ತಮ್ಮ ನೆಚ್ಚಿನ ನಟನ ಆರೋಗ್ಯ ಕುರಿತಂತೆ ಆತಂಕಗೊಂಡಿದ್ದಾರೆ. ಸುಂದರ್ ಸಿ ನಿರ್ದೇಶನದಲ್ಲಿ ವಿಶಾಲ್ ನಟಿಸುವುದಾಗಿ ಘೋಷಣೆಯಾಗಿದ್ದ ‘ಮದಗಜರಾಜ’ ಚಿತ್ರ ಸದ್ಯ ನಿರ್ಮಾಣವಾಗಿದೆ. ವಿಶಾಲ್, ಸಂತಾನಂ, ವರಲಕ್ಷ್ಮಿ, ಸತೀಶ್, ನಿತಿನ್ ಸತ್ಯ, ಸೋನುಸೂದ್, ಅಂಜಲಿ, ದಿವಂಗತ ನಟರಾದ ಮಣಿವಣ್ಣನ್, ಮನೋಬಾಲಾ, ಮೈಲಸ್ವಾಮಿ, ಚಿಟ್ಟಿಬಾಬು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮದಗಜರಾಜ’ ಚಿತ್ರವನ್ನು ಜೆಮಿನಿ ಫಿಲ್ಮ್ ಸರ್ಕ್ಯೂಟ್ ನಿರ್ಮಿಸಿದೆ. ವಿಶಾಲ್ ತೀವ್ರ ಜ್ವರದಿಂದ ಬಳಲುತ್ತಿದ್ದು, ಈ ನಡುವೆಯೂ ತಾನು ನಟಿಸಿದ ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎನ್ನಲಾಗಿದೆ. ವಿಜಯ್ ಆಂಟೋನಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ರಿಚರ್ಡ್ ಎಂ. ನಾಥನ್ ಅವರ ಛಾಯಾಗ್ರಹಣ. ಆರ್ಯ ಅತಿಥಿ ಪಾತ್ರದಲ್ಲಿ ಮತ್ತು ಸದಾ ಒಂದು ಹಾಡಿಗೆ ಕುಣಿದಿದ್ದಾರೆ. Click