ವೈರಲ್ ಹುಡುಗಿಯ ಬಡತನದ ಬದುಕು ಹೇಗಿದೆ..! ಮಣಿಗಳ ಹಾರ ಮಾರುವ ಮೊನಾಲಿಸಾಗೆ ಆಫರ್ ಕೊಟ್ಟ ಡೈರೆಕ್ಟರ್ ಯಾರು..?

ನ್ಯೂಸ್ ನಾಟೌಟ್: ಮಹಾಕುಂಭದ ವೈರಲ್ ಹುಡುಗಿಯ ಕುರಿತ ಮತ್ತೊಂದು ಸುದ್ದಿ ಹೊರಬಿದ್ದಿದೆ. ಕಣ್ಣುಗಳ ಮೂಲಕ ವೈರಲ್ ಆಗಿರುವ ಮೊನಾಲಿಸಾ ಘೋಷ್ಲೆಯ ಬಡತನದ ಬಡತನದ ಕಥೆ ಹೊರಬಂದಿದೆ. 17 ವರ್ಷದ ಮೊನಾಲಿಸಾ, ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ವಾರ್ಡ್​ ನಂಬರ್ 9 ನಿವಾಸಿಯಾಗಿದ್ದಾಳೆ. ಮೊನಾಲಿಸಾ ಕುಟುಂಬವು ಹಲವು ವರ್ಷಗಳಿಂದ ಇಲ್ಲಿ ನೆಲೆಸಿದೆ. ಇವರ ಅಜ್ಜ ಲಕ್ಷ್ಮಣ್ ಘೋಷ್ಲೆ ಸುಮಾರು 20 ವರ್ಷಗಳ ಹಿಂದೆ ಮನೆ ಕಟ್ಟಲು ಜಮೀನು ಗುತ್ತಿಗೆಗೆ ಪಡೆದುಕೊಂಡಿದ್ದರು. ಅದೇ ಜಾಗದಲ್ಲಿ ಚಿಕ್ಕ ಕೋಣೆ, ಹಾಲ್, ಅಡುಗೆ ಮನೆ ಕಟ್ಟಿಕೊಂಡಿದ್ದಾರೆ. ಅದೇ ಮನೆಯಲ್ಲಿ ಮೊನಾಲಿಸಾ ಅವರ ಇಡೀ ಕುಟುಂಬ ಇಂದಿಗೂ ವಾಸವಿದೆ. ಹಾಗೇ ಮೊನಾಲಿಸಾಗೆ ಒಬ್ಬ ಸಹೋದರಿ, ಇಬ್ಬರು ಸಹೋದರರು ಇದ್ದಾರೆ. ಮೊನಾಲಿಸಾ ಹೆತ್ತವರೊಂದಿಗೆ ಓಂಕಾರೇಶ್ವರ, ಮಂಡು, ಮಹೇಶ್ವರ ಸೇರಿದಂತೆ ಇತರೆ ಧಾರ್ಮಿಕ ಸ್ಥಳಗಳಿಗೆ ಹಾರ ಮಾರಲು ಹೋಗುತ್ತಾಳೆ. ಪ್ರಸ್ತುತ ಕುಂಭ ಮೇಳಕ್ಕೆ ಬಂದಿದ್ದಳು.ಮೊನಾಲಿಸಾ ಕುಟುಂಬ ವಾರಾಣಸಿ ಮತ್ತು ಹರಿದ್ವಾರಕ್ಕೆ ಹೋಗಿ ಕಚ್ಚಾ ವಸ್ತುಗಳನ್ನು ತರುತ್ತದೆ. ರುದ್ರಾಕ್ಷಿ ಮತ್ತು ಇತರೆ ಮುತ್ತಿನ ಮಣಿಗಳನ್ನು ತಂದು ಹಾರ ಮಾಡಿ ಮಾರಾಟ ಮಾಡುತ್ತಿದೆ. ಈ ಮೂಲಕ ಅವರ ಕುಟುಂಬ ಸಾಗುತ್ತಿದೆ. ಇನ್ನು, ಮಹಾಕುಂಭದಲ್ಲಿ ನೋಡುಗರ ಕಣ್ಮನ ಸೆಳೆದ ಮೊನಾಲಿಸಾಗೆ ಬಾಲಿವುಡ್ ​​ನಿಂದ ಆಫರ್ ​ವೊಂದು ಬಂದಿದೆ ಎನ್ನಲಾಗಿದೆ. ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿದೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ ಮುಂದಿನ ದಿನಗಳಲ್ಲಿ ಬಾಲಿವುಡ್ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಡೈರೆಕ್ಟರ್​ ಸನೋಜ್ ಮಿಶ್ರಾರಿಂದ ಮೊನಾಲಿಸಾ ಆಫರ್ ಹೋಗಿದೆ ಎನ್ನಲಾಗಿದೆ. Click