ಸರ್ಕಾರಿ ನೌಕರಿಯಲ್ಲಿದ್ದ ವ್ಯಕ್ತಿ ಥೈಲ್ಯಾಂಡ್ ಯುವತಿಯರನ್ನ ಕರೆತಂದು ಮೈಸೂರಿನ ವೇಶ್ಯಾವಾಟಿಕೆ..! 7 ಜನ ಪೊಲೀಸ್ ವಶಕ್ಕೆ..!

ನ್ಯೂಸ್ ನಾಟೌಟ್ : ಮೈಸೂರಿನಲ್ಲಿ ಥೈಲ್ಯಾಂಡ್‌ ಯುವತಿಯನ್ನು ಇಟ್ಟುಕೊಂಡು ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದ ವ್ಯಕ್ತಿಯೇ ಥೈಲ್ಯಾಂಡ್ ಯುವತಿಯರನ್ನ ಕರೆತಂದು ಮೈಸೂರಿನ ಹೋಟೆಲ್‌ ವೊಂದರಲ್ಲಿ ವೇಶ್ಯೆವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಕೆಎಸ್‌ಆರ್‌ಟಿಸಿ ನೌಕರ ರತನ್ ಥೈಲ್ಯಾಂಡ್ ಬ್ಯೂಟಿ ಇಟ್ಕೊಂಡು ದಂಧೆ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ರತನ್ ಜೊತೆ ರೇವಣ್ಣ ಎಂಬಾತನೂ ಸಾಥ್ ಕೊಟ್ಟಿದ್ದ. ಥೈಲ್ಯಾಂಡ್ ಬ್ಯೂಟಿ ಬಳಸಿ ಓರ್ವ ಗಿರಾಕಿಯಿಂದ 8 ರಿಂದ 10 ಸಾವಿರ ರೂ. ವಸೂಲಿ ಮಾಡುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬೋಗಾದಿ ಬಳಿ ಇರುವ ಹೋಟೆಲ್‌ ನಲ್ಲಿ ವಾಸವಿದ್ದ ಥೈಲ್ಯಾಂಡ್ ಯುವತಿ ಜೊತೆ ಮತ್ತೊಬ್ಬ ಯುವತಿಯೂ ವೇಶ್ಯೆವಾಟಿಕೆಯಲ್ಲಿ ತೊಡಗಿದ್ದಳು. ವೇಶ್ಯಾವಾಟಿಕೆ ನೆಡೆಯುತಿದ್ದ ಸ್ಥಳಕ್ಕೆ ಒಡನಾಡಿ ಸೇವಾ ಸಂಸ್ಥೆ ಮತ್ತು ಪೊಲೀಸರು ದಾಳಿ ಮಾಡಿ ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ. ಜೊತೆಗೆ ಪೊಲೀಸರು 7 ಜನರನ್ನ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಕೇಳಿದ್ದಕ್ಕೆ ಬ್ಯುಸಿನೆಸ್ ಪರ್ಪಸ್‌ ಗೆ ಬಂದಿದ್ದೇನೆ ಎಂದ ಥೈಲ್ಯಾಂಡ್ ಯುವತಿ. 1 ದಿನದ ಹಿಂದಷ್ಟೇ ಮೈಸೂರಿಗೆ ಬಂದಿದ್ದೆ ಎಂಬ ಮಾಹಿತಿ ನೀಡಿದ್ದಾಳೆ. ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Click